ರೈತರು ತಿರುಗಿಬಿದ್ದರೆ ಸರ್ಕಾರ ಉಳಿಯುವುದಿಲ್ಲ
ಹಾವೇರಿ(ಸವಣೂರು): ರೈತರು ತಿರುಗಿಬಿದ್ದರೆ ಯಾವುದೇ ಸರ್ಕಾರ ಉಳಿಯುವುದಿಲ್ಲ. ಕಡಕೋಳ ಗ್ರಾಮವಷ್ಟೇ ಅಲ್ಲ ರಾಜ್ಯದ ಯಾವುದೇ ರೈತರ ಜಮೀನು ಅನ್ಯಾಯವಾಗಿ ವಕ್ಫ್‌ಗೆ ಹೋಗಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಸವಣೂರು ತಾಲೂಕಿನ ಕಡಕೋಳ ಗ್ರಾಮಕ್ಕೆ ಮಾಜಿ ಸಚಿವ ಸಿ.ಟಿ ರವಿ ಅವರೊಂದಿಗೆ ಭೇಟಿ ನೀಡಿ, ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ನಾನು ಈ ಕ್ಷೇತ್ರದ ಪ್ರತಿನಿಧಿ ಒಂದಿಂಚು ಜಮೀನು ಕೂಡ ಅನ್ಯಾಯವಾಗಿ ವಕ್ಫ್‌ಗೆ ಹೋಗದಂತೆ ನೋಡಿಕೊಳ್ಳುತ್ತೇನೆ. ನಿಮ್ಮನ್ನು ಯಾರೂ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ ಎಂದರು.
ಈ ವಕ್ಫ್ ಅದಾಲತ್, ಮಂತ್ರಿ, ಡಿಸಿ ಏನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಮ್ಮ ಪ್ರಧಾನ ಮಂತ್ರಿ ವಕ್ಫ್ ಕಾನೂನು ಸಂಪೂರ್ಣ ತಿದ್ದುಪಡಿ ಮಾಡಲು ತೀರ್ಮಾನ ಮಾಡಿದ್ದಾರೆ. ಕಂದಾಯ ಇಲಾಖೆ ಜಮೀನು ವಿಚಾರ ನೋಡಿಕೊಳ್ಳವೇಕು. ಸಿಇಒ ಯಾರು ಇದೆಲ್ಲ ಕೇಳಲು, ರೈತರ ಬಳಿ ನೂರಾರು ವರ್ಷದ ಜಮೀನು ಖರೀದಿ ದಾಖಲೆ ಇದೆ. ಆದರೂ ರಾತ್ರೊ ರಾತ್ರಿ ಕಳ್ಳತನದಿಂದ ಖಾತೆ ಬದಲು ಮಾಡಲು ಹೊರಟಿದೆ. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹಳ್ಳಿಗೆ ಹಬ್ಬಿದೆ. ವಕ್ಫ್ ಕಾಯಿದೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಈಗ ಜನಶಕ್ತಿ ಮತ್ತು ಅಧಿಕಾರ ಶಾಹಿ ನಡುವೆ ಸಂಘರ್ಷ ನಡೆದಿದೆ. ಜನ ಶಕ್ತಿಯ ಮುಂದೆ ಯಾವ ಶಕ್ತಿಯೂ ನಿಲ್ಲುವುದಿಲ್ಲ ಎಂದು ಹೇಳಿದರು.
ನಿಮ್ಮೊಂದಿಗೆ ನಾವಿದ್ದೇವೆ: ಸಿ.ಟಿ.ರವಿ
ನಮ್ಮ ರೈತರ ಆಸ್ತಿ, ಮಠ, ಸ್ಮಶಾನವನ್ನು ವಕ್ಪ್ ಹೆಸರಿನಲ್ಲಿ ಕಬಳಿಸಲು ಬಂದರೆ, ಕಡಕೋಳ ಜನರು ಒಬ್ಬಂಟಿ ಅಲ್ಲ, ನಾವು ನಿಮ್ಮೊಂದಿಗೆ ಜೀವಕ್ಕೆ ಜಿವ ಕೊಡಲು ಸಿದ್ದರಿದ್ದೇವೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದರು.
ಭಷ್ಮಾಸುರನಿಗೆ ವರ ಕೊಟ್ಡರೆ ಅವನು ತಲೆ ಮೇಲೆ ಕೈ ಇಡಲು ಬರುತ್ತಿದ್ದಾರೆ. 1947 ರಲ್ಲೇ ಮುಸ್ಲೀಮರಿಗೆ ಪ್ರತ್ಯೇಕ ದೇಶ ಕೊಟ್ಡಿದ್ದೆವೆ. ಆಗಲೇ ಅವರನ್ನು ಹೊರಗೆ ಹಾಕಿದ್ದರೆ ಇಷ್ಡೆಲ್ಲ ಆಗುತ್ತಿರಲಿಲ್ಲ. ವಕ್ಪ್ ಕಾಯ್ದೆ ಮಾಡಿರುವುದರಿಂದ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ ಎಂದರು.
ಮುಸಲ್ಮಾನರನ್ನು 1947 ರಲ್ಲಿ ಗಡಿ ದಾಟಿಸಿ ಆಗಿದೆ. ಈಗ ಮತ್ತ ಜಮೀನು ಮನೆ ಆಸ್ತಿ ನಮ್ಮದು, ಅಂತ ಬಂದರೆ ಮತ್ತೆ ಗಡಿ ದಾಟಿಸಲು ನಮಗೂ ಗೊತ್ತಿದೆ. ಎದೆ ಮೇಲೆ ಬಂದು ನ್ಯಾಯ ಕೇಳಿ ಕೊಡುತ್ತೇವೆ. ಅನ್ಯಾಯವಾಗಿ ನಮ್ಮ ಜಮೀನು ವಶಪಡಿಸಿಕೊಳ್ಳಲು ಬಂದರೆ, ಅದಕ್ಕೆ ಉತ್ತರ ಕೊಡಲು ನಮಗೂ ಗೊತ್ತಿದೆ. ಈ ದೇಶದಲ್ಲಿ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಉಳಿಯಬೇಕು. ಸಂವಿಧಾನ ಉಳಿಸಲು ಕೋಮುವಾದಿಕರಣ ಮಾಡುತ್ತಿರುವ ಕಾಂಗ್ರೆಸ್ ಗೆ ಪಾಠ ಕಲಿಸಬೇಕು. ಈ ಉಪ ಚುನಾವಣೆ ನಮ್ಮ ಆಸ್ತಿ ಉಳಿಸಿಕೊಳ್ಳಲು, ನಮ್ಮ ಮಠ, ಸ್ಮಶಾನ, ಸಂವಿಧಾನ, ದೇಶ ಉಳಿಸಲು ಕಾಂಗ್ರೆಸ್‌ನ್ನು ಸೋಲಿಸಬೇಕು ಎಂದು ಹೇಳಿದರು.