For the best experience, open
https://m.samyuktakarnataka.in
on your mobile browser.

ರೈತರ ಕಲ್ಯಾಣ ಕೇಂದ್ರ ಸರಕಾರದ ಮೊದಲ ಆದ್ಯತೆ

01:29 PM Sep 14, 2024 IST | Samyukta Karnataka
ರೈತರ ಕಲ್ಯಾಣ ಕೇಂದ್ರ ಸರಕಾರದ ಮೊದಲ ಆದ್ಯತೆ

ನವದೆಹಲಿ: ಬಾಸುಮತಿ ಅಕ್ಕಿಯನ್ನು ರಫ್ತು ಮಾಡಲು ನೋಂದಣಿ-ಕಮ್-ಹಂಚಿಕೆ ಪ್ರಮಾಣಪತ್ರಗಳನ್ನು ನೀಡಲು ಸರ್ಕಾರವು ಪ್ರತಿ ಟನ್‌ಗೆ ಕನಿಷ್ಠ ರಫ್ತು ಬೆಲೆ ೯೫೦ ಡಾಲರ್‌ಗಳ ನಿಯಮವನ್ನು ತೆಗೆದುಹಾಕಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ರೈತರ ಅಭಿವೃದ್ಧಿಗೆ ಬದ್ಧವಾಗಿರುವ ಮೋದಿ ಸರ್ಕಾರವು ರೈತರ ಹಿತದೃಷ್ಟಿಯಿಂದ ಮೋದಿ ಸರ್ಕಾರವು ಬಾಸ್ಮತಿ ಅಕ್ಕಿ ಮೇಲಿನ ಕನಿಷ್ಠ ರಫ್ತು ಸುಂಕವನ್ನು ತೆಗೆದುಹಾಕಲು ನಿರ್ಧರಿಸಿದೆ.
ರಫ್ತು ಸುಂಕವನ್ನು ತೆಗೆದುಹಾಕುವುದರಿಂದ, ಬಾಸ್ಮತಿ ಉತ್ಪಾದಿಸುವ ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುತ್ತಾರೆ ಮತ್ತು ಬಾಸ್ಮತಿ ಅಕ್ಕಿಗೆ ಬೇಡಿಕೆಯ ಹೆಚ್ಚಳದೊಂದಿಗೆ, ರಫ್ತು ಕೂಡ ಹೆಚ್ಚಾಗುತ್ತದೆ. ಸಂಸ್ಕರಿಸಿದ ತೈಲದ ಮೂಲ ಸುಂಕವನ್ನು 32.5% ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಈ ನಿರ್ಧಾರದಿಂದ ಸಾಸಿವೆ, ಸೂರ್ಯಕಾಂತಿ ಮತ್ತು ಶೇಂಗಾ ಬೆಳೆಗಳಿಗೆ ರಿಫೈನರಿ ಎಣ್ಣೆಗೆ ಬೇಡಿಕೆ ಹೆಚ್ಚಲಿದೆ. ರೈತರು ಈ ಬೆಳೆಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಸಣ್ಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಸ್ಕರಣಾಗಾರಗಳು ಹೆಚ್ಚಾದಂತೆ, ಅಲ್ಲಿ ಉದ್ಯೋಗಾವಕಾಶಗಳು ಸಹ ಹೆಚ್ಚಾಗುತ್ತವೆ. ಈರುಳ್ಳಿ ರಫ್ತು ಸುಂಕವನ್ನು 40% ರಿಂದ 20% ಕ್ಕೆ ಇಳಿಸಿದೆ. ರಫ್ತು ಸುಂಕ ಕಡಿತದಿಂದ ಈರುಳ್ಳಿ ಉತ್ಪಾದಿಸುವ ರೈತರಿಗೆ ಈರುಳ್ಳಿಗೆ ಉತ್ತಮ ಬೆಲೆ ಸಿಗಲಿದ್ದು, ಈರುಳ್ಳಿ ರಫ್ತು ಕೂಡ ಹೆಚ್ಚಲಿದೆ.
ಸರ್ಕಾರದ ಈ ನಿರ್ಧಾರದಿಂದ ರೈತರು ಮತ್ತು ಇತರೆ ಈರುಳ್ಳಿ ಸಂಬಂಧಿತ ವಲಯಗಳಿಗೂ ನೇರ ಲಾಭ ದೊರೆಯಲಿದೆ.

Tags :