For the best experience, open
https://m.samyuktakarnataka.in
on your mobile browser.

ಲಂಚ ಕೇಳಿದ ಅಧಿಕಾರಿಗಳ ವಿರುದ್ಧ ಕ್ರಮ

04:29 PM Nov 28, 2024 IST | Samyukta Karnataka
ಲಂಚ ಕೇಳಿದ ಅಧಿಕಾರಿಗಳ ವಿರುದ್ಧ ಕ್ರಮ

ಬೆಂಗಳೂರು: ಅಬಕಾರಿ ಇಲಾಖೆಯ ಅಧಿಕಾರಿಗಳು ಬಾರ್​ ಲೈಸೆನ್ಸ್​ ನೀಡಲು 40 ಲಕ್ಷ ಬೇಡಿಕೆ ಇಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಮತ್ತು ಇಲಾಖಾ ತನಿಖೆಗೆ ಆದೇಶ ನೀಡಲಾಗುವುದು ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ತಿಳಿಸಿದ್ದಾರೆ.
ಮಂಡ್ಯದ ಅಬಕಾರಿ ಡಿಸಿ ರವಿ ಶಂಕರ್​ ಮತ್ತು ಇನ್ಸ್​ಪೆಕ್ಟರ್​ ಶಿವ ಶಂಕರ್​ ವಿರುದ್ದ ಲಂಚ ಕೇಳಿದ ಆರೋಪ ಬಂದಿದೆ. ಇಲಾಖೆಯಲ್ಲಿನ ಇಂತಹ ಅಧಿಕಾರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಅವರನ್ನು ಇಂದೇ ಉಚ್ಚಾಟನೆ ಮಾಡಲಾಗುವುದು, ರವಿಶಂಕರ್ ಮತ್ತು ಇನ್ಸ್​ಪೆಕ್ಟರ್ ಶಿವಶಂಕರ್ ವಿರುದ್ಧ ಕ್ರಮ ಜರುಗಿಸಲಾಗುವುದು ಮತ್ತು ಇಲಾಖಾ ತನಿಖೆಗೆ ಆದೇಶ ನೀಡಲಾಗುವುದು ಎಂದು ಹೇಳಿದರು.

ಲಂಚದ ಆರೋಪ: ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಂದೂಪುರ ಗ್ರಾಮದಲ್ಲಿ ಸಿಎಲ್ 7 ಬಾರ್ ಅಂಡ್ ರೆಸ್ಟೋರೆಂಟ್‌‌ಗೆ ಅನುಮತಿ ‌ಪಡೆಯಲು‌ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಪುನೀತ್ ಅವರು ಮೊದಲು ಆನ್ ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅನ್ ಲೈನ್ ಅರ್ಜಿ ರಿಜೆಕ್ಟ್ ಆದ ಹಿನ್ನೆಲೆ ಕಚೇರಿಗೆ ತೆರಳಿ ಬಾರ್ ಅನುಮತಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಲಂಚ ಕೊಡದೇ ಇದ್ದರೆ, ಲೈಸನ್ಸ್ ಕೊಡಲ್ಲ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ ಎಂದು ಆರೋಪಿಸಿ, ಕೊನೆಗೆ ಆಡಿಯೋ ವಿಡಿಯೋ ಸಮೇತ ಮಂಡ್ಯ ಲೋಕಾಯುಕ್ತಕ್ಕೆ ಪುನೀತ್ ದೂರು ಸಲ್ಲಿಸಿದ್ದಾರೆ. ಅಬಕಾರಿ ಡಿಸಿ ರವಿಶಂಕರ್, ಮದ್ದೂರು ಅಬಕಾರಿ ಇನ್ಸ್ ಪೆಕ್ಟರ್ ಶಿವಶಂಕರ್ ವಿರುದ್ಧ ದೂರು ನೀಡಲಾಗಿತ್ತು.