For the best experience, open
https://m.samyuktakarnataka.in
on your mobile browser.

ಲಂಚ ಪಡೆಯುತ್ತಿದ್ದ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

01:50 PM Nov 15, 2024 IST | Samyukta Karnataka
ಲಂಚ ಪಡೆಯುತ್ತಿದ್ದ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

50 ಸಾವಿರ ಲಂಚ ಪಡೆಯುವಾಗಲೇ ಪುರಸಭೆಯ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ

ಭಟ್ಕಳ : ಪುರಸಭೆಯ ಮುಖ್ಯಾಧಿಕಾರಿ ಲಂಚ ಪಡೆಯುವಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.
50 ಸಾವಿರ ಲಂಚ ಪಡೆಯುವಾಗಲೇ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೆಸ್ತಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿ ಕೆಲವು ತಿಂಗಳುಗಳಿಂದ ನೀಲಕಂಠ ಮೆಸ್ತಾ ಕೆಲಸ ಮಾಡುತ್ತಿದ್ದರು. ಭಟ್ಕಳದ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಬಿರುಸಾಗಿ ಸಾಗುತ್ತಿದೆ. ಈ ಒಳಚರಂಡಿ ಕಾಮಗಾರಿಗೆ 50 ಸಾವಿರ ರೂ. ಲಂಚ ಪಡೆಯುವಾಗ ಪುರಸಭೆಯ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ. ತಮ್ಮ ಕಚೇರಿಯಲ್ಲಿ ಲಂಚ ಪಡೆಯುವಾಗ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕಾರವಾರ ಲೋಕಾಯುಕ್ತ ಎಸ್ ಪಿ ಕುಮಾರ ಚಂದ್ರ ನೇತೃತ್ವದಲ್ಲಿ ನಡೆದ ದಾಳಿ ನಡೆದಿದೆ.

Tags :