ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಲಡ್ಡುವಿನಲ್ಲಿ ಹಂದಿಕೊಬ್ಬು: ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ

04:58 PM Sep 20, 2024 IST | Samyukta Karnataka

ಬೆಳಗಾವಿ: ದೇಶದಲ್ಲಿ ತಿರುಪತಿ ತಿರುಮಲದಲ್ಲಿ ವಿತರಿಸುವ ಲಡ್ಡುವಿನಲ್ಲಿ ಹಂದಿ ಕೊಬ್ಬು, ಮೀನಿನ ಎಣ್ಣೆ ಮಿಶ್ರಣ ಮಾಡುತ್ತಾರೆ ಎನ್ನಲಾಗುತ್ತಿದ್ದು, ಇದು ಗಂಭೀರವಾದ ಪ್ರಕರಣ. ಇದು ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಎಂದು ಸಂಸದ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವರದಿಯಿಂದ ಭಕ್ತರು ನಂಬಿಕೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಆಂಧ್ರಪ್ರದೇಶ ಮಾಜಿ ಸಿಎಂ ಜಗನ್ ಮೋಹನ ರೆಡ್ಡಿ ಕ್ರಿಶ್ಚಿಯನ್ ಕನ್ವರ್ಟೆಡ್ ಇರೋರು. ಹೀಗಾಗಿ ಆತನಿಗೆ ಹಿಂದೂ ಧರ್ಮದ ಮೇಲೆ ಯಾವುದೇ ರೀತಿಯ ನಂಬಿಕೆ, ವಿಶ್ವಾಸವಿಲ್ಲ. ಹಿಂದೂಗಳ ನಂಬಿಕೆಯನ್ನು ಡಿಸ್ಟರ್ಬ್ ಮಾಡೊದಕ್ಕೆ ಅವರು ನೋಡಿದ್ದಾರೆ. ಚಂದ್ರಬಾಬು ನಾಯ್ಡು ಲ್ಯಾಬ್ ವರದಿ ಆಧಾರದ ಮೇಲೆ ಹೇಳಿದ್ದಾರೆ. ಆದರೆ ವರದಿಯನ್ನು ಗಮನಿಸಿದ್ರೆ ಈ ರೀತಿಯ ಸಂಶಯಗಳು ಶುರುವಾಗುತ್ತಿವೆ. ವರದಿ ನಿಜವಾಗಿದ್ರೆ ಜಗನ್ ಮೋಹನ ರೆಡ್ಡಿ, ಗುತ್ತಿಗೆ ಪಡೆದ ಎಲ್ಲರ ಮೇಲೆಯೂ ಕಾನೂನು ಕ್ರಮ ಆಗಬೇಕೆಂದು ನಾನು ಒತ್ತಾಯ ಮಾಡುತ್ತೇನೆ ಎಂದರು.

Tags :
belagavifishhindu‌jagadish shettartirupati ladduYS Jagan Mohan Reddy
Next Article