ಲವ್ ಜಿಹಾದಿ ಬದಲು ಲ್ಯಾಂಡ್ ಜಿಹಾದಿ
ಹುಬ್ಬಳ್ಳಿ: ಮುಖ್ಯಮಂತ್ರಿ ಮೌಖಿಕ ಆದೇಶದ ಮೇರೆಗೆ 15 ದಿನಗಳ ಒಳಗೆ ಎಲ್ಲಾ ಹೆಸರನ್ನು ಕೂರಿಸಬೇಕಂತೆ ಅಧಿಕಾರಿಗಳ ಮೇಲೆ ಒತ್ತಡ ತರಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸುಮಾರು 45 ರಿಂದ 46 ಜನರಿಗೆ ನೋಟಿಸ್ ನೀಡಲಾಗಿದೆ. ನಾವು ಅಲ್ಲಿ ಹೋದ ನಂತರ ರಾಜ್ಯ ಸರ್ಕಾರದಿಂದ ಎಲ್ಲಾ ನೋಟಿಸ್ ಅನ್ನ ಹಿಂಪಡೆಯಲು ನಿರ್ಧಾರ ಮಾಡಲಾಗಿದೆ. ನೋಟೀಸ್ ಕೊಟ್ಟು ಮತ್ತೆ ಹಿಂಪಡೆಯುತ್ತಾರೆ ಅಂದ್ರೆ ಬಹು ದೊಡ್ಡ ಗೋಟಾಲಾ ನಡೆದಿದೆ ಅಂತ ಸ್ಪಷ್ಟ ಆಗುತ್ತದೆ ಎಂದು ಹರಿಹಾಯ್ದರು.
ಪಹಣಿಯಲ್ಲಿ ಖಾತೆ 9 ಮತ್ತು 11ರಲ್ಲಿ ಹೆಸರು ಕೂರಿಸಿದ್ದಾರೆ. ಹೆಸರು ಕೂರಿಸಲು ಆರು ತಿಂಗಳುಗಟ್ಟಲೆ ಸಮಯಾವಕಾಶ ತೆಗೆದುಕೊಳ್ಳುತ್ತದೆ. ಇದನ್ನು ನೋಡಿದರೆ ಬಹಳ ಬೇಗ ಹೆಸರು ಕೂರಿಸುವ ಕೆಲಸ ಆಗಿದೆ. ಭೂಮಿಗಳನ್ನು ಕಬಳಿಸುವ ಕೆಲಸ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೀತಾ ಇದೆ. ಕೇವಲ ವಿಜಯಪುರ ಮಾತ್ರವಲ್ಲ ಧಾರವಾಡ, ಗದಗ, ಯಾದಗಿರಿ ಜಿಲ್ಲೆ ಸೇರಿ ಹಲವು ಕಡೆಗಳಲ್ಲಿ ಈ ರೀತಿಯಾಗಿವೆ, ಲ್ಯಾಂಡ್ ಹೊಡೆದು ಅಲ್ಪಸಂಖ್ಯಾತರಿಗೆ ಕೊಟ್ಟು ದುರ್ಬಳಕೆ ಮಾಡುವ ವಿಚಾರ ನಡೆದಿದೆ. ಎಲ್ಲಾ ದಾಖಲೆಗಳು ತಂದಿದ್ದೇನೆ ಅದನ್ನ ನಿಮಗೆ ಕೊಡ್ತೇನೆ. ಸರ್ಕಾರಿ ದಾಖಲೆಗಳಲ್ಲಿ ಬಂದಿರುವಂತಹ ಸಂಗತಿ ಇದು ನಡವಳಿಯಲ್ಲಿ ಏನಾಗಿದೆ ಅಂತ ನಾನು ಬಹಿರಂಗಪಡಿಸಿ ಇದನ್ನು ನೋಡಿದರೇ ರಾಜ್ಯದಲ್ಲಿ ಲವ್ ಜಿಹಾದಿ ಬದಲು ಲ್ಯಾಂಡ್ ಜಿಹಾದಿ ಆರಂಭ ಆಗಿದೆ ಎಂದರು.