For the best experience, open
https://m.samyuktakarnataka.in
on your mobile browser.

ಲಾಠಿ ಬೀಸಿದವರಿಗೆ 10ಸಾವಿರ ಬಹುಮಾನ

10:10 AM Dec 22, 2024 IST | Samyukta Karnataka
ಲಾಠಿ ಬೀಸಿದವರಿಗೆ 10ಸಾವಿರ ಬಹುಮಾನ

ಅಧಿಕಾರಿ ಫೀಲ್ಡಿಗೆ ಇಳಿದದ್ದು ಬಹುಷಃ ಇದೆ ಮೊದಲ ಬಾರಿ ಇರಬೇಕು

ಬೆಂಗಳೂರು: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ ಘೋಷಿಸಿದ ಲಿಂಗಾಯತ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬೆಳಗಾವಿ ನಗರದ ಪೊಲೀಸ್ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ಇವರಿಗೆ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಉತ್ತಮ ಕರ್ತವ್ಯ ನಿರ್ವಹಣೆಗೆ 10,000 ರೂ ಬಹುಮಾನ ನೀಡಿದ್ದಾರೆ. ಇನ್ಸ್ಪೆಕ್ಟರ್  ಗಡ್ಡೇಕರ ಹಾಗೂ ಹಿತೇಂದ್ರ [IPS] ಪಂಚಮಸಾಲಿ ಸಮುದಾಯಕ್ಕೆ 2 A ಮೀಸಲು ನೀಡಬೇಕೆಂದು ಹೋರಾಟ ಮಾಡುತ್ತಿದ್ದವರ ಮೇಲೆ ಲಾಠಿ ಬೀಸಿ ಅಮಾನವೀಯವಾಗಿ ನಡೆದುಕೊಂಡಿದ್ದರು.

ಪ್ರತಿಭಟನಾಕಾರರನ್ನು ಹತ್ತಿಕ್ಕಲು ಖುದ್ದು ADGP ಶ್ರೇಣಿಯ ಅಧಿಕಾರಿ ಫೀಲ್ಡಿಗೆ ಇಳಿದದ್ದು ಬಹುಷಃ ಇದೆ ಮೊದಲ ಬಾರಿ ಇರಬೇಕು. ತಾವು ಮಾಡಿದ್ದು ಸರಿ ಎಂದು ಸಮಜಾಯಿಷಿಯನ್ನು ಸಹ ನೀಡಿದ್ದರು.

ನ್ಯಾಯಯುತವಾದ ಬೇಡಿಕೆಯನ್ನು ಲಾಠಿ ಮೂಲಕ ಉತ್ತರಿಸಿದ ಲಿಂಗಾಯತ ವಿರೋಧಿ ಹಾಗೂ ಹಿಂದೂ ವಿರೋಧಿ ಸರ್ಕಾರಕ್ಕೆ ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ. ಡಿಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಗಳಲ್ಲಿ ಒಂದು ಕೋಮಿನ ತಪ್ಪಿತಸ್ಥರ ವಿರುದ್ಧ ಪ್ರಕರಣವನ್ನು ಕೈ ಬಿಡಬೇಕು ಎಂದು ಶಿಫಾರಸನ್ನು ಬಹುತೇಕ ಒಪ್ಪಿಕೊಂಡಿದ್ದ ಸರ್ಕಾರ, ಇಂದು ಪಂಚಮಸಾಲಿಗಳ  ನೆತ್ತರು ಹರಿಸಿದವರಿಗೆ ಬಹುಮಾನ ಘೋಷಣೆ ಮಾಡಿದೆ.

ಕಿಂಚಿತ್ತೂ ಮಾನವೀಯತೆ ಇಲ್ಲದ ಅಧಿಕಾರಿಗಳ ಹೆಸರನ್ನು ಮರೆಯದಿರಿ.  ಲಾಠಿ ಪ್ರಹಾರ ನಡೆಸಿದ್ದವರನ್ನು ಹಾಗೂ ಲಾಠಿ ಬೀಸಲು ಪ್ರಚೋದನೆ ಕೊಟ್ಟ ನಿರ್ಲಜ್ಜ ಕಾಂಗ್ರೆಸ್ ಸರ್ಕಾರವನ್ನು ಪಂಚಮಸಾಲಿಗಳು ಎಂದಿಗೂ ಕ್ಷಮಿಸೋಲ್ಲ ಎಂದಿದ್ದಾರೆ.

Tags :