ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ
ಆನ್ಲೈನ್ ಬುಕ್ಕಿಂಗ್- ಕ್ಯೂಆರ್ ಕೋಡ್ ಮೂಲಕ ಎಂಟ್ರಿ
ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ನಲ್ಲಿ ಇಂದಿನಿಂದ ಜನವರಿ 27ರ ವರೆಗೆ ‘ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ- 217ನೇ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಪ್ರದರ್ಶನಕ್ಕೆ ಬರುವವರಿಗೆ ಇದೇ ಮೊದಲ ಬಾರಿಗೆ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗಿದ್ದು, ಇಂದಿನಿಂದ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಮುಂಗಡ ಟಿಕೆಟ್ ಬುಕ್ ಮಾಡಲು https://hasiru.karnataka.gov.in/floweshow/login.aspx ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಟಿಕೆಟ್ ಬುಕ್ ಮಾಡಿ ಈ ಲಿಂಕ್ನಲ್ಲಿ ಬರುವ ಕ್ಯೂಆರ್ ಕೋಡ್ನ್ನು ಸ್ಕ್ಯಾನ್ ಮಾಡುವ ಮೂಲಕ ಟಿಕೆಟ್ ಪಡೆಯಬಹುದಾಗಿದೆ. ಅದನ್ನು ದ್ವಾರದಲ್ಲಿ ತೋರಿಸಿ ಸುಲಭವಾಗಿ ಪ್ರವೇಶ ಮಾಡಬಹುದಾಗಿದೆ, ವಾಲ್ಮೀಕಿ ಮಹರ್ಷಿ, ಆಶ್ರಮ, ಹುತ್ತ, ಜಟಾಯು ಪಕ್ಷಿ, ರಾಮಾಯಣ ಮಹಾಕಾವ್ಯ ಕೃತಿಯ ಪ್ರತಿಕೃತಿ, ರಾಮಾಯಣ ಬರೆಯಲು ಕುಳಿತಿರುವ ದೃಶ್ಯ, ತಪಸ್ಸಿಗಾಗಿ ಕೂತು ಅವರ ಸುತ್ತಲೂ ಹುತ್ತ ಬೆಳೆಯುವಷ್ಟು ಏಕಾಗ್ರತೆ ಮೂಡಿರುವುದು ಹೀಗೆ ನಾನಾ ಪ್ರತಿಕೃತಿಗಳನ್ನು ಪ್ರದರ್ಶನದಲ್ಲಿನಿರ್ಮಿಸಲಾಗಿದೆ. ರಾಮಾಯಣದ ಓಲೆಗರಿ ಹಸ್ತ ಪ್ರತಿಗಳ ಪ್ರದರ್ಶನ, ಗಾಜಿನ ಮನೆಯ ಒಳಾಂಗಣಕ್ಕೆ ತಂಪು ನೀಡಲಿರುವ ಫಾಗರ್ಸ್ ಹೀಗೆ ಹಲವು ಆಕರ್ಷಣೆಗಳಿಂದ ಕೂಡಿದ್ದು, ಫಲ-ಪುಫ್ಪ ಪ್ರದರ್ಶನದಲ್ಲಿ ಈ ಬಾರಿ ಸುಮಾರು 10 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ಸಾಧ್ಯತೆಗಳಿವೆ.