ಲಿಫ್ಟ್ ವೈಯರ್ ಕಟ್: ಓರ್ವ ಸಾವು
09:54 PM Apr 30, 2024 IST
|
Samyukta Karnataka
ಹುಬ್ಬಳ್ಳಿ: ಲಿಫ್ಟ್ ರೂಫ್ ವೈಯರ್ ಕಟ್ಟಾಗಿ ಐದನೇ ಮಹಡಿಯಿಂದ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಮಲ್ಲೇಶ್ವರನಗರ ನಿವಾಸಿ ಮಂಜುನಾಥ ಕುರವತ್ತಿಮಠ(೩೨) ಮೃತಪಟ್ಟವರು. ಮಂಗಳವಾರ ಓಣಿ ನಿವಾಸಿ ಸುರೇಶ ಕಂಗ್ರಾಳಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನೀಲಿಜನ್ ರಸ್ತೆಯಲ್ಲಿರುವ ಶ್ರೀನಾಥ ಬಿಲ್ಡಿಂಗ್‌ನ ಐದನೇ ಮಹಡಿಯಲ್ಲಿರುವ ಗುರುಕೃಪಾ ಫಾರ್ಮಾಕ್ಕೆ ಪಾರ್ಸಲ್ ತೆಗೆದುಕೊಂಡು ಮರಳಿ ಲಿಫ್ಟ್‌ನಲ್ಲಿ ಹೋಗುವಾಗ ಏಕಾಏಕಿ ಲಿಫ್ಟ್ ರೂಫ್ ವೈಯರ್ ಕಟ್ಟಾಗಿ ಐದನೇ ಮಹಡಿಯಿಂದ ಕೆಳ ಮಹಡಿಗೆ ಬಿದ್ದಿದೆ. ಮಂಜುನಾಥನಿಗೆ ಒಳಪೆಟ್ಟು ಬಿದ್ದು, ಸಾವನ್ನಪ್ಪಿದ್ದು, ಸುರೇಶ ಗಾಯಗೊಂಡಿದ್ದಾರೆ. ಲಿಫ್ಟ್ ಅಳವಡಿಸಿದ ಕಂಪನಿ ವಿರುದ್ಧ ಈರಯ್ಯ ಕುರುವತ್ತಿಮಠ ಎಂಬುವವರು ದೂರು ದಾಖಲಿಸಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Article