ಲೈಫ್ ಗಾರ್ಡ್‌ಗಳಿಗೆ ಮೂಲ ಸೌಕರ್ಯ ನೀಡಲಿ
ಬೆಂಗಳೂರು: ಲೈಫ್ ಗಾರ್ಡ್‌ಳಿಗೆ ಆಧುನಿಕ ಉಪಕರಣ ಕೊಟ್ಟಿದ್ದರೆ ಕೋಲಾರದ ಶಾಲೆಯ ಮಕ್ಕಳ್ಳನ್ನು ರಕ್ಷಿಸಬಹುದಾಗಿತ್ತು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಜೀವರಕ್ಷಕರಾದ ಲೈಫ್ ಗಾರ್ಡ್ ಗಳಿಗೆ ಆಧುನಿಕ ಉಪಕರಣಗಳು, ಸಂವಹನ ಸಾಧನಗಳು ನೀಡಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಸಚಿವರುಗಳ ಕೊಠಡಿಯ ನವೀಕರಣ, ಹೊಸ ಕಾರು ಖರೀದಿ, ವಿಮಾನದಲ್ಲಿ ಪ್ರಯಾಣಕ್ಕೆ ಅಸ್ತು ಎನ್ನುವ ಸರ್ಕಾರ ಸಾರ್ವಜನಿಕರ ಜೀವನ ರಕ್ಷಣೆಗೆ ಯಾವುದೇ ಉಪಕ್ರಮ/ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದು ನಿಜಕ್ಕೂ ಖಂಡನೀಯ. ಮುರುಡೇಶ್ವರ ಕಡಲ ತೀರದಲ್ಲಿ ಲೈಫ್ ಗಾರ್ಡ್ಗಳಿಗೆ ಆಧುನಿಕ ಉಪಕರಣ ಕೊಟ್ಟಿದ್ದರೆ ಕೋಲಾರದ ಶಾಲೆಯ ಮಕ್ಕಳ್ಳನ್ನು ರಕ್ಷಿಸಬಹುದಾಗಿತ್ತು. ಸರ್ಕಾರ ಈಗಲಾದರೂ ಎಚೆತ್ತುಕೊಳ್ಳಲಿ. ಲೈಫ್ ಗಾರ್ಡ್ ಗಳಿಗೆ ಸಂಭಾವನೆ, ಆಧುನಿಕ ಉಪಕರಣಗಳು, ಸಂವಹನ ಸಾಧನಗಳು, ಜೀವ ರಕ್ಷಕ ಬೋಟ್ ಗಳು ಸೇರಿದಂತೆ ಅವಶ್ಯ ಇರುವ ಜೀವ ರಕ್ಷಕ ಸಾಧನ/ಮೂಲ ಸೌಕರ್ಯಗಳನ್ನು ನೀಡಲಿ. ಹಾಗೆಯೇ, ತೀರದಲ್ಲಿ ಎಚ್ಚರಿಕೆ ಫಲಕಗಳು ಹಾಕುವ ಕೆಲಸ ಆಗಲಿ ಎಂದಿದ್ದಾರೆ.