ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಲೋಕಸಭೆಯಲ್ಲಿ ದಾಳಿ: ಪ್ರತಾಪಸಿಂಹ ವಿಚಾರಣೆ ಮಾಡುವ ಅಗತ್ಯ ಇಲ್ಲ

04:49 PM Dec 17, 2023 IST | Samyukta Karnataka

ಕಲಬುರಗಿ: ಲೋಕಸಭೆಯಲ್ಲಿನ ದಾಳಿ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪಸಿಂಹ ಅವರು ಸ್ಪೀಕರ್ ಅವರನ್ನು ಭೇಟಿ ಮಾಡಿದ್ದಾರೆ. ಅವರಿಗೆ ವಿಚಾರಣೆ ಮಾಡುವುದು ಅಗತ್ಯವಿಲ್ಲ ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದರು.
ಇಂದಿಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭೆ ಮೇಲಿನ ದಾಳಿ ನಡೆಯಬಾರದಿತ್ತು. ಭದ್ರತಾ ಲೋಪದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸ್ಪೀಕರ್ ಅವರು ೮ ಜನರನ್ನು ಅಮಾನತು ಮಾಡಿದ್ದು, ಉನ್ನತ ತನಿಖೆ ಕೂಡಾ ನಡೆದಿದೆ ಎಂದರು.
ಕ್ಷೇತ್ರದವರು, ಪರಿಚಯಸ್ಥರ ಮೂಲಕ ಬಂದ ವ್ಯಕ್ತಿಗಳು ಕೇಳಿದರೆ ಪಾಸ್ ಕೊಡಬೇಕಾಗುತ್ತದೆ. ಅದೇ ರೀತಿಯಾಗಿ ಪ್ರತಾಪಸಿಂಹ ಅವರೂ ನೀಡಿದ್ದಾರೆ. ಎಲ್ಲಾ ಎಂ.ಪಿ.ಗಳು ಇದನ್ನೆ ಮಾಡುತ್ತಾರೆ. ಅತಿ ಹೆಚ್ಚಿನ ಪಾಸ್ ಕೊಟ್ಟ ಎಂ.ಪಿ. ನಾನೇ ಇದ್ದೇನೆ ಎಂದ ಅವರು, ಪ್ರತಾಪಸಿಂಹ ಅವರ ಕುರಿತು ಯಾವುದೋ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರ ಮೇಲೆ ವಿಪಕ್ಷಗಳು ದಾಳಿ ಮಾಡುತ್ತಿವೆ. ಪ್ರತಾಪಸಿಂಹ ಯಂಗ್ ಅಂಡ್ ಡೈನಾಮಿಕ್, ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಭದ್ರತಾ ಲೋಪ ಆಗಿದ್ದರಿಂದ ಅವರ ವಿಚಾರಣೆ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಗ್ಯಾಲರಿಯಿಂದ ಯುವಕ ಜಂಪ್ ಮಾಡಿ, ಸ್ಪೀಕರ್ ಕಡೆ ಹೋಗುತ್ತಿದ್ದಾಗ ನಮ್ಮ ಎಂಪಿಗಳು ಅವನನ್ನು ಹಿಡಿದಿದ್ದಾರೆ. ಬಾಗಿ ಶೂ ತೇಗೆದು ಎಸೆಯುತ್ತಾನೆ ಏನೋ ಎನ್ನುವಾಗಲೆ ಶೂದಲ್ಲಿದ್ದ ವಸ್ತು ಹೊರತೇಗೆದು ಹಳದಿ ಬಣ್ಣದ ಹೋಗೆ ಬಿಟ್ಟಿದ್ದಾನೆ. ಈ ಸಂದರ್ಭದಲ್ಲಿ ನಾವಾರು ಇಲಿಗಳಂತೆ ಹೋಗಿಲ್ಲ. ಹುಲಿಗಳಂತೆ ಆತನನ್ನು ಹಿಡಿದೆವು ಎಂದರು.
ಲೋಕಸಭೆಯಲ್ಲಿನ ದಾಳಿ ಕುರಿತಂತೆ ವಿಪಕ್ಷಗಳು ರಾಜಕೀಯ ಮಾಡಬಾರದು. ಈಗಾಗಲೇ ಇಂತಹ ಘಟನೆಗಳು ೪೦ ಬಾರಿ ನಡೆದಿವೆ. ಆದರೆ ಇತ್ತಿಚಿನ ಚುನಾವಣೆಯಲ್ಲಿ ಸೋಲು ಕಂಡಿವರು ಅವರು ಹತಾಸೆ ಮನೋಭಾವನೆಯಿಂದ ಈ ಘಟನೆಯನ್ನು ಪ್ರಮುಖವಾಗಿಸುತ್ತಿವೆ. ಇದು ಸರಿಯಾದ ವರ್ತನೆ ಅಲ್ಲ. ಅಧಿವೇಶನ ನಡೆಯಲು ವಿಪಕ್ಷದವರು ಅವಕಾಶ ಕಲ್ಪಿಸಿಕೊಡಬೇಕೆಂದು ಅವರು ಮನವಿ ಮಾಡಿದರು.

Next Article