ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಲೋಕಸಭೆಯ ಸಂದೇಶದ ಚುನಾವಣೆ, ಗ್ಯಾರಂಟಿಗೆ ಒಪ್ಪದ ಮತದಾರ

07:25 PM Dec 03, 2023 IST | Samyukta Karnataka

ಸುರತ್ಕಲ್: ದೇಶದ ಪ್ರಮುಖ ರಾಜ್ಯಗಳ ಚುನಾವಣೆಯ ಫಲಿತಾಂಶ ಲೋಕಸಭೆಯ ಸಂದೇಶದ ಚುನಾವಣೆಯಾಗಿದೆ. ಗ್ಯಾರಂಟಿಗಿಂತ ನಮಗೆ ದೇಶ, ರಾಷ್ಟ್ರೀಯತೆ ಮುಖ್ಯ ಎಂದು ಮತದಾರ ಬಿಜೆಪಿ ಬೆಂಬಲಿಸಿ ಮತದಾನ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್ ವಿಚಲಿತವಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ನುಡಿದರು.
ಸುರತ್ಕಲ್‍ನಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಘಡದಲ್ಲಿ ಜಯಗಳಿಸಿದ್ದು, ಈ ಪ್ರಯುಕ್ತ ಸುರತ್ಕಲ್ ಜಂಕ್ಷನ್ ಹಾಗೂ ಕಾವೂರು ಜಂಕ್ಷನ್‌ನಲ್ಲಿ ನಡೆದ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಗ್ಯಾರಂಟಿಗಳಿಗೆ ಆದ್ಯತೆ ನೀಡದ ಮಹಿಳಾ ಮತದಾರರು ಬಿಜೆಪಿಯನ್ನು ಬೆಂಬಲಿಸಿ ಅಧಿಕಾರ ಹಿಡಿಯಲು ನೆರವಾಗಿದ್ದಾರೆ. ತೆಲಂಗಾಣದಲ್ಲಿ ಭಾರೀ ಪ್ರಮಾಣದಲ್ಲಿ ಮತಗಳಿಸಿ, ಮತದಾರರ ಪ್ರೀತಿಗೆ ಪಾತ್ರವಾಗಿದ್ದೇವೆ. 8ಕ್ಕೂ ಅಧಿಕ ನಮ್ಮ ಶಾಸಕರು ವಿಧಾನಸಭೆ ಪ್ರವೇಶಿಸಿದ್ದಾರೆ. ನಾಯಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ನಾಯಕರ, ವಿವಿಧ ರಾಜ್ಯದ ಕಾರ್ಯಕರ್ತರ ಅವಿರತ ಶ್ರಮದಿಂದ ಬಿಜೆಪಿ ರಾಜ್ಯಭಾರ ಹೆಚ್ಚಾಗುತ್ತಿದೆ. ಮುಂದೆ ಲೋಕಸಭೆಯಲ್ಲಿಯೂ ಇಂತಹ ಭರ್ಜರಿ ಫಲಿತಾಂಶ ನಿರೀಕ್ಷಿಸಬಹುದಾಗಿದೆ ಎಂದರು.
ಮಂಡಲದ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಶಕ್ತಿ ಕೇಂದ್ರದ ಪ್ರಮುಖರಾದ ವಿಠಲ ಸಾಲಿಯಾನ್ ಮಾತನಾಡಿದರು. ಪ್ರಮುಖರಾದ ಗಣೇಶ್ ಹೊಸಬೆಟ್ಟು, ಅಶೋಕ್ ಶೆಟ್ಟಿ ತಡಂಬಬೈಲ್, ಸುನೀಲ್ ಕುಳಾಯಿ, ಜಯಂತ್ ಸಾಲಿಯಾನ್, ರಾಜೇಶ್ ಮುಕ್ಕ, ರಣ್‍ದೀಪ್ ಕಾಂಚನ್, ಸಂದೀಪ್ ಪಚ್ಚನಾಡಿ, ಸಿತೇಶ್ ಕೊಂಡೆ, ಯುವ ಮೋರ್ಚಾದ ಭರತ್‍ರಾಜ್ ಕೃಷ್ನಾಪುರ, ತಿಲಕ್, ಜಯಾನಂದ ಚೇಳಾೈರು, ಸುರೇಶ್,ಓಂ ಪ್ರಕಾಶ್ ಶೆಟ್ಟಿಗಾರ್, ಮನಪಾ ಸದಸ್ಯರಾದ ಶ್ವೇತ ಪೂಜಾರಿ, ಸರಿತ ಶಶಿಧರ್, ಶೋಭಾ ರಾಜೇಶ್, ಲೋಕೇಶ್ ಬೊಳ್ಳಾಜೆ, ಲೋಹಿತ್ ಅಮೀನ್, ಶರತ್ ಕುಮಾರ್, ಸುಮಂಗಲರಾವ್, ಗಾಯತ್ರಿ ರಾವ್, ಸಂಗೀತಾ ನಾಯಕ್ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

Next Article