ಲ್ಯಾಪ್‌ಟಾಪ್ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಭಾರತದಲ್ಲಿ ನಿರ್ಮಾಣ
ಮೇಕ್ ಇನ್ ಇಂಡಿಯಾ ಉಪಕ್ರಮದಡಿ ಮಹತ್ವದ ಮೈಲಿಗಲ್ಲು
ಚೆನ್ನೈ: ತಮಿಳುನಾಡಿನ ಸಿರ್ಮಾ ಎಸ್.ಜಿ.ಎಸ್ ಟೆಕ್ನಾಲಜಿ ಲಿಮಿಟೆಡ್ ನಲ್ಲಿ ಲ್ಯಾಪ್ ಟಾಪ್‌ಗಳನ್ನು ಉತ್ಪಾದಿಸಲು ಹೊಸ ಅಸೆಂಬ್ಲಿ ಲೈನ್‌ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಶಂಕುಸ್ಥಾಪನೆ ಮಾಡಿದ್ದಾರೆ.
ಎಐ ಶಕ್ತ ಪರ್ಸನಲ್ ಕಂಪ್ಯೂಟರ್ಗಳು ಮತ್ತು ವಿಶ್ವದರ್ಜೆ ಗೇಮಿಂಗ್ ಲ್ಯಾಪ್ಟಾಪ್ಗಳ ತಯಾರಿಕೆಗೆ ಹೆಸರುವಾಸಿಯಾದ ತೈವಾನ್ ಮೂಲದ ಎಂಎಸ್ಐ ಸಂಸ್ಥೆಯು ಭಾರತದ ಸಿರ್ಮಾ ಎಸ್ಜಿಎಸ್ ಟೆಕ್ನಾಲಜಿ ಜೊತೆ ಸೇರಿ ಈ ಲ್ಯಾಪ್‌ಟಾಪ್ ಅಸೆಂಬ್ಲಿಂಗ್ ನಡೆಸುತ್ತಿದೆ. ಈ ಲ್ಯಾಪ್ಟಾಪ್ಗಳ ಅಸೆಂಬ್ಲಿಂಗ್ ಕಾರ್ಯ ಮಾತ್ರವಲ್ಲ, ಅದರ ಬಿಡಿಭಾಗಗಳು ಸೇರಿದಂತೆ ಇಡೀ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಭಾರತದಲ್ಲಿ ನಿರ್ಮಾಣವಾಗಲಿ ಎಂದಿರುವ ಸಚಿವರು ಈ ಸೌಲಭ್ಯವು ಮೇಕ್ ಇನ್ ಇಂಡಿಯಾ ಉಪಕ್ರಮದಡಿ ಮಹತ್ವದ ಮೈಲಿಗಲ್ಲಾಗಿದೆ, ಆರಂಭದಲ್ಲಿ ವಾರ್ಷಿಕವಾಗಿ ಒಂದು ಲಕ್ಷ ಲ್ಯಾಪ್ ಟಾಪ್‌ಗಳ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ಮುಂದಿನ 2 ವರ್ಷಗಳಲ್ಲಿ ಉತ್ಪಾದನಾ ಸಾಮರ್ಥ್ಯ ವರ್ಷಕ್ಕೆ ಹತ್ತು ಲಕ್ಷಕ್ಕೆ ಹೆಚ್ಚಳ ಮಾಡುವ ನೀರಿಕ್ಷೆ ಇದೆ ಎಂದಿದ್ದಾರೆ.