ವಕ್ಫ್ ವಿವಾದ: 7ರಂದು ರಾಜ್ಯಕ್ಕೆ ಜೆಪಿಸಿ ಅಧ್ಯಕ್ಷ
04:05 PM Nov 05, 2024 IST
|
Samyukta Karnataka
ಬೆಂಗಳೂರು: ನವೆಂಬರ್ 7ರಂದು ವಕ್ಫ್ ತಿದ್ದುಪಡಿ ವಿಧೇಯಕದ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಈ ಕುರಿತಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವಕ್ಫ್(ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದ ಸಮಿತಿಯ ಅಧ್ಯಕ್ಷರು ಹಾಗೂ ಸಂಸದರು ಆಗಿರುವ ಜಗದಂಬಿಕಾ ಪಾಲ್ ಅವರು ವಕ್ಫ್‌ನಿಂದ ಆಗುತ್ತಿರುವ ಅನ್ಯಾಯವನ್ನು ಖುದ್ದಾಗಿ ವಿಚಾರಿಸಲು ನವಂಬರ್ 7ರಂದು ಆಗಮಿಸುತ್ತಿದ್ದಾರೆ. ವಕ್ಫ್ ಕಾಯ್ದೆ ವಿರುದ್ಧ ನಾವು ಈಗಾಗಲೇ ಅಹರ್ನಿಶಿ ಹೋರಾಟವನ್ನು ಪ್ರಾರಂಭಿಸಿದ್ದು ಜೆ.ಪಿ.ಸಿ ಯ ಅಧ್ಯಕ್ಷರಿಗೆ ಹಾಗೂ ಸಮಿತಿಗೆ ಪೂರ್ಣ ವಿವರವನ್ನು ಕೊಡಲಿದ್ದೇವೆ. ಜೆ.ಪಿ.ಸಿ ಯ ಅಂತಿಮ ವರದಿಯಲ್ಲಿ ರೈತರಿಗಾಗಲಿ, ಸ್ಮಾರಕಗಳಿಗಾಗಲಿ, ಸರ್ಕಾರಿ ಕಚೇರಿಗಳಿಗಾಗಲಿ, ಭೂ ಮಾಲೀಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದಿದ್ದಾರೆ.
Next Article