ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು…

03:58 PM Nov 09, 2024 IST | Samyukta Karnataka

ವಕ್ಫ್ ಹೆಸರಿನಲ್ಲಿ ಬಡವರಿಗೆ ಮತ್ತು ಹಿಂದೂಗಳಿಗೆ ನೋಟೀಸ್ ನೀಡದಂತೆ ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತ ಆದೇಶ ಹೊರಡಿಸಿ

ಹಾವೇರಿ: ನಾವು ರೈತರ ಪರವಾಗಿ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಮೃತ ಬಡರೈತನ ಮನೆಗೆ ಭೇಟಿ ನೀಡಿ ಅವರಿಂದಲೇ ಮಾಹಿತಿ ಪಡೆದಿರುವ ಸಚಿವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ವಕ್ಫ್ ಮಂಡಳಿಯ ಭೂಕಳ್ಳತನದ ಮಾಫಿಯಾಗೆ ಬೇಸತ್ತು ಈ ಹಿಂದೆ ಹಾನಗಲ್ ತಾಲೂಕಿನ ಹರನಗಿರಿಯಲ್ಲಿ ಓರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. 1964 ರಿಂದ ತಮ್ಮದೇ ಹೆಸರಿನಲ್ಲಿದ್ದ ಜಮೀನನ್ನು 2015 ರಲ್ಲಿ ಕೆಲ ಸಮಾಜಘಾತುಕರು ವಕ್ಫ್ ನಿಯಮದ ಪ್ರಕಾರ ಸಂಪೂರ್ಣ ಜಮೀನು ತಮ್ಮದಾಗಿಸಿಕೊಂಡು ಬೆಳೆದು ನಿಂತಿದ್ದ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡಿ ಬಡ ರೈತನ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನು ಬಹಿರಂಗಪಡಿಸಿದ ಮಾಧ್ಯಮದ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ಕೇಸ್ ದಾಖಲಿಸುತ್ತದೆ ಮತ್ತು ಇದರ ಕುರಿತು ಟ್ವೀಟ್ ಮಾಡಿದ್ದ ಸಂಸದ
ತೇಜಸ್ವಿ ಸೂರ್ಯ ಅವರ ಮೇಲೂ FIR ದಾಖಲಾಗಿದೆ. ಈ ಘಟನೆಯ ಸಂಪೂರ್ಣ ಮಾಹಿತಿ ಪಡೆಯಲು ಇಂದು ಸಂಸದ ಗೋವಿಂದ ಕಾರಜೋಳ್‌ ಅವರೊಂದಿಗೆ ಬಡರೈತನ ಮನೆಗೆ ಭೇಟಿ ನೀಡಿ ಅವರಿಂದಲೇ ಮಾಹಿತಿ ಪಡೆದೆನು. ಮೃತ ಯುವಕನ ತಂದೆ ತಾಯಿ ಮತ್ತು ಮನೆಯವರಿಗೆ ಸಾಂತ್ವಾನ ಹೇಳಿ, ಈ ಘಟನೆಗೆ ನ್ಯಾಯಾಲಯದಲ್ಲಿ ಇರುವ ಅವಕಾಶವನ್ನು ಪರಿಶೀಲಿಸಿ ಆ ಮೂಲಕ ನ್ಯಾಯ ಒದಗಿಸಲು ಭಾರತೀಯ ಜನತಾ ಪಕ್ಷದ ವತಿಯಿಂದ ಜವಾಬ್ದಾರಿ ಹೊತ್ತಿದ್ದೇನೆ. ಇಲ್ಲಿ ಮತ್ತೋರ್ವ ಅಲ್ಪಸಂಖ್ಯಾತ ಬಡ ರೈತನ ಜಮೀನನ್ನು ಕೂಡ ವಕ್ಫ್ ಕಬಳಿಸಿದೆ ಎಂಬುದು ಗೊತ್ತಾಗಿದೆ. ನಾವು ರೈತರ ಪರವಾಗಿ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ.
ವಕ್ಫ್ ಹೆಸರಿನಲ್ಲಿ ಬಡವರ ಜಮೀನು ಕಸಿದುಕೊಳ್ಳುವ ಯಾವುದೇ ಕ್ರಮವನ್ನು ನಾವು ಒಪ್ಪುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ವಕ್ಫ್ ಹೆಸರಿನಲ್ಲಿ ಬಡವರಿಗೆ ಮತ್ತು ಹಿಂದೂಗಳಿಗೆ ನೋಟೀಸ್ ನೀಡದಂತೆ ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತ ಆದೇಶ ಹೊರಡಿಸುವಂತೆ ಆಗ್ರಹಿಸುತ್ತೇನೆ ಎಂದಿದ್ದಾರೆ.

Tags :
#CongressFailsKarnataka#WaqfBoard#ಪ್ರಲ್ಹಾದಜೋಶಿ#ರೈತವಿರೋಧಿಕಾಂಗ್ರೆಸ್
Next Article