ವಜ್ರದಲ್ಲಿ ರಾಮಮಂದಿರ
02:20 PM Dec 19, 2023 IST | Samyukta Karnataka
ಗುಜರಾತ್: ಸೂರತ್‌ನಲ್ಲಿ ರಾಮಮಂದಿರದ ಥೀಮ್‌ನಲ್ಲಿ ವಜ್ರದ ಹಾರವನ್ನು ತಯಾರು ಮಾಡಲಾಗಿದೆ.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಿಲಿದ್ದು, ಗುಜರಾತ್ ಮೂಲದ ವ್ಯಾಪಾರಿಯೊಬ್ಬರು ರಾಮ ಮಂದಿರದ ಪರಿಕಲ್ಪನೆಯಲ್ಲಿ ಈ ಹಾರವನ್ನು ತಯಾರಿಸಿದ್ದು ಈ ಸಂಪೂರ್ಣ ವಿನ್ಯಾಸದಲ್ಲಿ 5,000 ಅಮೇರಿಕನ್ ವಜ್ರಗಳನ್ನು ಬಳಸಲಾಗಿದೆ ಮತ್ತು ವಜ್ರದ ಹಾರವನ್ನು 2 ಕೆಜಿ ಬೆಳ್ಳಿಯಿಂದ ಮಾಡಲಾಗಿದೆ, 40 ಕುಶಲಕರ್ಮಿಗಳು ಈ ವಿನ್ಯಾಸವನ್ನು 35 ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ. ಈ ಅಭೂತಪೂರ್ವ ವಜ್ರದ ಹಾರ ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ. ನಾವು ಅದನ್ನು ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲು ಬಯಸಿದ್ದೇವೆ ಎಂದು ವಜ್ರದ ವ್ಯಾಪಾರಿ ಹೇಳಿದ್ದಾರೆ.