For the best experience, open
https://m.samyuktakarnataka.in
on your mobile browser.

ವಯನಾಡ್ ಭೂಕುಸಿತ: ಸಾವಿನ ಸಂಖ್ಯೆ 148ಕ್ಕೆ ಏರಿಕೆ

11:34 AM Jul 31, 2024 IST | Samyukta Karnataka
ವಯನಾಡ್ ಭೂಕುಸಿತ  ಸಾವಿನ ಸಂಖ್ಯೆ 148ಕ್ಕೆ ಏರಿಕೆ

ಮಂಗಳವಾರ ಮುಂಜಾನೆ ಕೇರಳದ ವಯನಾಡ್ ಜಿಲ್ಲೆಯ ಹಲವು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿ ನೋಡ ನೋಡುತ್ತಲೇ ನೂರಾರು ಜನ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಮಂಗಳವಾರವೇ ರಕ್ಷಣಾ ಕಾರ್ಯಚರಣೆ ಆರಂಭವಾಗಿದ್ದು ಸಾವನ್ನಪ್ಪಿದವರ ಸಂಖ್ಯೆ 148ಕ್ಕೆ ಏರಿಕೆಯಾಗಿದೆ. ಭೂಕುಸಿತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಗುರುತಿಸಲಾಗುತ್ತಿಲ್ಲ. ಪತ್ತೆ ಮಾಡಲಾದ ದೇಹಗಳನ್ನು ಮೃತರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ರಾಜ್ಯದ ಪೋತುಕಲ್‌ನ ಚಾಲಿಯಾರ್ ನದಿಯಿಂದ 16 ಶವಗಳು ಪತ್ತೆಯಾಗಿವೆ. ಇದಲ್ಲದೆ ಮೃತ ದೇಹಗಳ ತುಂಡುಗಳನ್ನು ಸಹ ಹೊರತೆಗೆಯಲಾಗಿದೆ. ಇನ್ನೂ ಹಲವರು ಕೆಸರಿನಲ್ಲಿ ಸಿಕ್ಕಿಬಿದ್ದಿರುವ ಅಥವಾ ಕೊಚ್ಚಿ ಹೋಗಿರುವ ಸಾಧ್ಯತೆಗಳಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಅಲ್ಲದೆ 128 ಮಂದಿ ಗಾಯಗೊಂಡಿದ್ದಾರೆ. 800ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಭಾರತೀಯ ಸೇನೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ತಾತ್ಕಾಲಿಕ ಸೇತುವೆಯ ಮೂಲಕ ಸುಮಾರು ಸಾವಿರಾರು ಜನರನ್ನು ರಕ್ಷಿಸುವಲ್ಲಿ ಸೇನೆ ಯಶಸ್ವಿಯಾಗಿದೆ.

ಕನ್ನಡಿಗರಿಗೆ ಸಹಾಯವಾಣಿ: ಕರ್ನಾಟಕ ಸರ್ಕಾರವು ಇಬ್ಬರು ಐಎಎಸ್ ಅಧಿಕಾರಿಗಳ ನಿಯೋಜನೆ ಮಾಡಿದೆ. ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರಾಚರಣೆಗಳ ಕುರಿತಂತೆ ಸಮನ್ವಯಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಪಿ.ಸಿ. ಜಾಫರ್ (ಮೊ. 9448355577), ದಿಲೀಪ್‌ ಶಶಿ (ಮೊ.9446000514) ಅವರನ್ನು ನಿಯೋಜಿಸಿದೆ.