ವರ್ಷದ ವಿವರ ಶೀಘ್ರದಲ್ಲೇ ಬಹಿರಂಗ
01:46 PM May 30, 2024 IST | Samyukta Karnataka
ಬೆಂಗಳೂರು: ನಮ್ಮ 1ವರ್ಷ ಹಾಗೂ ಬಿಜೆಪಿಯವರ 4 ವರ್ಷಗಳಲ್ಲಾದ ಎಲ್ಲಾ ವಿವರಗಳನ್ನು ಶೀಘ್ರದಲ್ಲೇ ಬಹಿರಂಗ ಪಡಿಸುತ್ತೇನೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಬಂಡವಾಳ ಹೂಡಿಕೆ ಚೆನ್ನೈಗೆ ಹೋಗಿದೆ, ಬಂಡವಾಳ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ರಾಜ್ಯ ಬಿಜೆಪಿ ಕರ್ನಾಟಕ ನಾಯಕರ ಆಪಾದನೆಯಲ್ಲಿ ಹುರುಳಿಲ್ಲ. ಬಿಜೆಪಿಯ 4 ವರ್ಷಗಳ ಅವಧಿಯಲ್ಲಿ ಕೃಷಿ, ತೋಟಗಾರಿಕೆ, ಕೈಗಾರಿಕೆ, ವಸತಿ ಸೇರಿದಂತೆ ಯಾವುದೇ ಇಲಾಖೆ ಸಮರ್ಪಕವಾಗಿ ಕೆಲಸ ನಿರ್ವಹಿಸಿಲ್ಲ. ನಮ್ಮ 1ವರ್ಷದ ಅವಧಿಯ ಒಂದು ಉದಾಹರಣೆ ಕೊಡುವುದಾದರೆ ಫಾಕ್ಸ್ ಕಾನ್ 25 ಸಾವಿರ ಕೋಟಿರೂಗಳ ಕಾಮಗಾರಿ ಆರಂಭಿಸಿದೆ. ಅಮೆರಿಕಾ, ದಾವೋಸ್ ಭೇಟಿ ಸೇರಿದಂತೆ ನಮ್ಮ 1ವರ್ಷ ಹಾಗೂ ಬಿಜೆಪಿಯವರ 4 ವರ್ಷಗಳಲ್ಲಾದ ಎಲ್ಲಾ ವಿವರಗಳನ್ನು ಶೀಘ್ರದಲ್ಲೇ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ.