ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಾಯುದೇವರಿಂದಲೇ ಹರಿಸರ್ವೋತ್ತಮನ ಸಾಕ್ಷಾತ್ಕಾರ

04:53 AM Jan 08, 2025 IST | Samyukta Karnataka

ಸ್ವತಂತ್ರವಾಗಿ ನಿರ್ದೋಷನಾದವನು ಪರಮಾತ್ಮ ಒಬ್ಬನೇ. ಭಗವಂತ ಬರೀ ಉತ್ತಮ ಮಾತ್ರ ಅಲ್ಲ; ಉತ್ತಮ ಯಾವುದೋ ಅದೆಲ್ಲದಕ್ಕಿಂತಲೂ ಉತ್ತಮೋತ್ತಮ ಅಂದರೆ ಆತ ಸರ್ವೋತ್ತಮ.
ಆದರೆ ನಿತ್ಯ ಮುಕ್ತರು, ನಿರ್ದೋಷರು ಪರಮಾತ್ಮನ ಅನುಗ್ರಹದಿಂದ ಸಾಧನೆಯನ್ನು ಮಾಡಿ ಮುಗಿಸಿಕೊಂಡ ಮೇಲೆ ಕೂಡ ರಮಾದೇವಿ ಅನಾದಿಕಾಲ ಮುಕ್ತಳೆ ಅವಳು ನಿರ್ದೋಷಳೆ ಆದರೂ ಭಗವಂತನ ಅಧೀನವಾಗಿರುತ್ತಾಳೆ ಎಂಬುದನ್ನು ನಾವು ಪರಿಗಣಿಸಬೇಕು. ಇನ್ನು ಸರ್ವೋತ್ತಮನಾದ ಅಂತಹ ಭಗವಂತನಿಗೆ ಬಾಗಿದ ವಾಯುದೇವರು ಜೀವೋನ್ನತರಾಗಿದ್ದಾರೆ. ಅಂಥವರು ನಮ್ಮ ಪರವಾಗಿ ಪ್ರಾರ್ಥನೆ ಮಾಡಿದರೆ ಭಗವಂತ ಒಲಿದು ನಮಗೆ ರಕ್ಷಣೆ ನೀಡುತ್ತಾನೆ.
ನಮಗೆ ಭಗವಂತನಲ್ಲಿ ಏನು ಬೇಡಬೇಕು. ಹೇಗೆ ಬಿಡಬೇಕೆಂದು ಗೊತ್ತಿರುವದಿಲ್ಲ. ಗೊತ್ತಿದ್ದರೂ ಹಾಗೆ ಬಿಡುವುದಕ್ಕೆ ಆಗುವುದಿಲ್ಲ. ಏಕೆಂದರೆ ನಮ್ಮಲ್ಲಿ ಅಷ್ಟೊಂದು ಭಕ್ತಿ ವೈರಾಗ್ಯ ನಮ್ಮಲ್ಲಿ ಇಲ್ಲ. ಅಂದರೆ ಜೀವರಲ್ಲಿ ಅಸಾಧ್ಯವೇ. ಅಂತ ಭಕ್ತ ವೈರಾಗ್ಯವನ್ನು ಪಡೆದ ಪರಿಪೂರ್ಣವಾಗಿ ಪಡೆದುಕೊಂಡ ಪರಮ ವೈರಾಗ್ಯಶಾಲಿಗಳಾದ ಹನುಮಂತ ದೇವರು, ಭೀಮಸೇನ ದೇವರು, ವಾಯುದೇವರು, ಶ್ರೀಮದಾಚಾರ್ಯರು ನಮಗಾಗಿ ಸರ್ವೋತ್ತಮನಾದ ದೇವರಲ್ಲಿ ಪ್ರಾರ್ಥನೆ ಮಾಡಿ ನಮಗೆ ಅನುಗ್ರಹ ಮಾಡುತ್ತಾರೆ. ಅಂಥ ಮಹಿಮರಿಂದ ಅನುಗ್ರಹಗಳು ಪ್ರಾಪ್ತವಾದಾಗ ಮಾತ್ರ ಆಗ ನಿಜವಾದ ದೇವರ ಅನುಗ್ರಹ ಆಗುತ್ತದೆ. ದೇವರ ಅನುಗ್ರಹವನ್ನು ಧಾರಣ ಮಾಡಿಕೊಳ್ಳಲು ವಿಶಿಷ್ಠವಾದ ಅದಮ್ಯ ಶಕ್ತಿ ಬೇಕೇ ಬೇಕು. ಸಾಮಾನ್ಯ ಮನುಷ್ಯನಿಂದ ಅಥವಾ ಭಕ್ತನಿಂದ ಅಸಾಧ್ಯ. ಅದಕ್ಕೆ ಸಮರ್ಥವಾದವರಿಂದಲೇ ಅದನ್ನು ಪಡೆಯಬೇಕಾಗುತ್ತದೆ. ನಮ್ಮ ನಮ್ಮ ಯೋಗ್ಯತೆಗೆ ತಕ್ಕಂತೆ ವಾಯುದೇವರು ಅನುಗ್ರಹ ಮಾಡುತ್ತಾರೆ.
ವಿದ್ಯುತ್ ಹರಿಯುವಿಕೆಯನ್ನು ಪರಿಗಣಿಸಿಯೇ ಪರಿವರ್ತಕಗಳನ್ನು ಹಾಕುತ್ತೇವೆ. ಎಸಿಯಿಂದ ಡಿಸಿ ವಿದ್ಯುತ್‌ಗೆ ಬದಲಾಯಿಸುತ್ತೇವೆ. ಹೀಗೆ ಬದಲಾಯಿಸುವಾಗ ಅಪಾಯವುಂಟಾಗುವದಿಲ್ಲ. ವ್ಯತ್ಯಾಸವಾಯಿತೋ ವಿದ್ಯುತ್ ಅವಘಡಕ್ಕೆ ತುತ್ತಾಗಬೇಕಾಗುತ್ತದೆ. ಅದಕ್ಕೆಯೋಗ್ಯತೆಯ ತಕ್ಕಂತೆ ಜೀವಿಗೆ ಸಹಿಸಲು ಎಷ್ಟು ಬೇಕೋ ಅಷ್ಟು ಅನುಗ್ರಹವನ್ನು ವಾಯುದೇವರು ಭೀಮಸೇನ ದೇವರು ಶ್ರೀಮದಾಚಾರ್ಯರು ಕರುಣಿಸುತ್ತಾರೆ. ಭಗವಂತನಲ್ಲಿ ನಮ್ಮ ಪರವಾಗಿ ಪ್ರಾರ್ಥನೆಯನ್ನು ಮಾಡಿ ಎಂದು ವಾಯುದೇವರಲ್ಲಿ ನಾವು ಪ್ರಾರ್ಥಿಸಿದರೆ ಆಗ ಭಗವಂತ ಒಲಿದು ಅನುಗ್ರಹ ಮಾಡುತ್ತಾನೆ.
ಅಸತೋಮ ಸದ್ಗಮಯ. ಅಸತ್ತಿನಿಂದ ಸತ್ ಕಡೆಗೆ ಕರೆದುಕೊಂಡು ಹೋಗಬೇಕು ಎಂದು, ಅಸತ್ತನ್ನು ತಿಳಿಸದೆ ಸತ್ತನ್ನು ತಿಳಿಸುವದು. ಅಸತ್ತು ಇದು ದುಃಖ ಸತ್ ಎಂದರೆ ಸುಖ ಎಂದು ಶ್ರೀಮದ್ ಆಚಾರ್ಯರು ತಿಳಿಸಿಕೊಡುತ್ತಾರೆ. ಸತ್ ಎಂದರೆ ಸುಖ. ವ್ಯವಹಾರದಲ್ಲಿ ಮಾತನಾಡುವಾಗ, ಅವನು ಏನು ಇಲ್ಲದ ಹಾಗೆ ಅವರ ಕಥೆ ಮುಗಿಯಿತು. ಅವನಿನ್ನು ಇಲ್ಲದೆ ಇದ್ದ ಹಾಗೆ ಲೆಕ್ಕ ಅಂದರೆ ಯಾವ ವ್ಯಕ್ತಿ, ಕಳೆದುಕೊಂಡಿದ್ದಾನೆ ಎಲ್ಲವನ್ನು ಕಳೆದುಕೊಂಡು ಹಾನಿಯನ್ನು ಅನುಭವಿಸುತ್ತಿರುವನೋ ಅಂತಹ ವ್ಯಕ್ತಿ ಇದ್ದರೂ ಇಲ್ಲದಂತೆ.
ಅವನನ್ನು ಹಾಳಾದವನು ನಶಿಸಿ ಹೋದವನು ಎಂದು ಕರೆಯುತ್ತಾರೆ. ದುಃಖವನ್ನು ಅನುಭವಿಸುವ ಸಂದರ್ಭದಲ್ಲಿ ಅಸತ್ ಎಂದರೆ ಏಲ್ಲ ಇದ್ದರೂ ಇಲ್ಲದಂತೆ ಇಲ್ಲ ಎಂದು ವ್ಯವಹಾರದಲ್ಲಿ ಬಳಸುವುದು ಶಾಸ್ತ್ರೋಕ್ತ.
ಆ ದೃಷ್ಟಿಯಲ್ಲಿ ಶ್ರೀಮದಾಚಾರ್ಯರು ಅಸತೋಮ ಸದ್ಗಮಯ ಎಂದು ವ್ಯಾಖ್ಯಾನ ಮಾಡುತ್ತಾರೆ. ಇದ್ದರೂ ಇಲ್ಲದಂತೆ ಇರುವ ಅವಸ್ಥೆಯಲ್ಲಿ ನಾವಿದ್ದೇವೆ. ಹೇಗಿರಬೇಕು ಹಾಗೆ ಇಲ್ಲ. ಕಾರಣ ದೇವರಲ್ಲಿ ಭಕ್ತಿಗೆ ವಾಯುದೇವರ ಮೂಲಕವೇ ಮಾಡಬೇಕಾಗುತ್ತದೆ.

Next Article