ವಾರ್ಡ್‌ಗೆ ಸೌಲಭ್ಯ ಆಗ್ರಹಿಸಿ: ನಗರಸಭೆ ಸದಸ್ಯನಿಂದ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ
ನಮ್ಮ ವಾರ್ಡಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ ನಗರಸಭೆ ಮುಂದೆ ಶನಿವಾರ ತಲೆಯ ಮೇಲೆ ತಿರುಪತಿ ನಾಮ ಹಾಕಿದ್ದ ಸೈಜ್ ಕಲ್ಲು ಹೊತ್ತುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರಸಭೆಯ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. ಈ ಹಿನ್ನಲೆ ನಮ್ಮ ೧೬ನೇ ವಾರ್ಡಿನಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಇದಕ್ಕೆ ಅನುದಾನ ನೀಡಿಲ್ಲ. ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಬಿಜೆಪಿ ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಾಟೀಲ್ ಮತ್ತು ಪೌರಾಯುಕ್ತ ಸದಸ್ಯರಿಂದ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಸದಸ್ಯ ಸೋಮಣ್ಣ ಮೂರ್ನಾಲ್ಕು ವರ್ಷಗಳಿಂದಲೂ ಇದೇ ಹೇಳುತ್ತಾ ಬಂದಿದ್ದೀರಿ. ಜಿಲ್ಲಾಧಿಕಾರಿ ಬಂದು ಮನವಿ ಪಡೆಯಬೇಕು ಎಂದು ಪಟ್ಟುಹಿಡಿದು, ಪ್ರತಿಭಟನೆ ಮುಂದುವರೆಸಿದರು. ನಗರ ಪೊಲೀಸ್ ಠಾಣೆಯ ಪಿಐ ಜಯಪ್ರಕಾಶ, ಡಿಸಿ ಕಚೇರಿಗೆ ತೆರಳಿ, ಸಭೆ ಮನವಿ ಸಲ್ಲಿಸಿ ಎಂದು ಸೋಮಣ್ಣಗೆ ತಿಳಿಸಿದರು. ಜಿಲ್ಲಾಧಿಕಾರಿಯೇ ಇಲ್ಲಿಗೆ ಬರಬೇಕು ಎಂದು ಆಗ್ರಹಿಸಿದರು. ಕೊನೆಗೆ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮತ್ತು ಪೌರಾಯುಕ್ತ ಗಣಪತಿ ಪಾಟೀಲ್ ಗೆ ಮನವಿ ಸಲ್ಲಿಸಿದರು. ಕೊನೆಗೆ ನಗರಸಭೆ ಸಾಮಾನ್ಯ ಸಭೆಗೆ ಹಾಜರಾದರು.
ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಬಿಜೆಪಿ ಸದಸ್ಯ ಸರ್ವೇಶಗೌಡ, ಮಹೇಂದ್ರ ಛೋಪ್ರಾ ಇದ್ದರು.