For the best experience, open
https://m.samyuktakarnataka.in
on your mobile browser.

ವಾಹನಗಳಿಗೆ ಇಂಧನ ಬಳಕೆ ನೀತಿ ಜಾರಿಗೆ ಆಗ್ರಹ

01:56 PM Dec 27, 2024 IST | Samyukta Karnataka
ವಾಹನಗಳಿಗೆ ಇಂಧನ ಬಳಕೆ ನೀತಿ ಜಾರಿಗೆ ಆಗ್ರಹ

ಎಲ್ಲ ಇಲಾಖೆಗಳ ವಾಹನಗಳಿಗೆ 'ಇಂಧನ ನೀತಿ ಮಾರ್ಗಸೂಚಿ' ಪರಿಚಯಿಸಿ

ಬೆಂಗಳೂರು: ಸರ್ಕಾರದ ಎಲ್ಲಾ ಇಲಾಖೆಗಳಿಗೂ ಇಂಧನ ಬಳಕೆ ನೀತಿಯನ್ನು ಜಾರಿಗೊಳಿಸಬೇಕೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.
ಮುಖ್ಯ ಕಾರ್ಯದರ್ಶಿಗಳು ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ ಅಲ್ಪ ಸಂಖ್ಯಾತ ಕಲ್ಯಾಣ, ವಕ್ಷ ಹಾಗೂ ಹಣ್ಣ ಇಲಾಖೆಯಲ್ಲಿ ನಕಲಿ ಇಂಡೆಂಟ್‌'ಗಳನ್ನು ಕೂಟ್ಟ ಪೆಟ್ರೋಲ್ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಹಾಗೂ ಪಟ್ರೋಲ್ ಬಳಕೆ ಮಾಡಲು ಮಿತಿ ಹಾಗೂ ನಿಯಮಾವಳಿಗಳನ್ನು, ಮಾರ್ಗ ಸೂಚಿಗಳನ್ನು ನೀಡುವ ಕುರಿತು ಬರೆದಿದ್ದಾರೆ, ರಾಜ್ಯದ ತೆರಿಗೆ ಹಣವನ್ನು ಅತ್ಯಂತ ಜವಾಬ್ದಾರಿಯುತವಾಗಿ, ರಾಜ್ಯದ ಕಲ್ಯಾಣಕ್ಕೆ, ಅಭಿವೃದ್ಧಿ ಕಾರ್ಯಗಳಿಗೆ, ಉದ್ಯೋಗ ಸೃಜನೆ, ಮೂಲಸೌಕರ್ಯ ಅಭಿವೃದ್ಧಿ, ಬಡವರ, ರೈತರ ಶ್ರೇಯೋಭಿವೃದ್ಧಿಗೆ, ಮಹಿಳಾ ಸಬಲೀಕರಣ ಉಪಯೋಗಿಸಬೇಕು. ಆದರೆ, ಅಲ್ಪ ಸಂಖ್ಯಾತ ಕಲ್ಯಾಣ ಹಾಗೂ ವ ಇಲಾಖೆಯಲ್ಲಿ ಮನಬಂದಂತೆ ಪೆಟ್ರೋಲ್ ಇಂಡೆಂಟ್ ಗಳನ್ನು ಬಳಸಿಕೊಂಡು ಸರ್ಕಾರಿ ವಾಹನ ಚಾಲಕರು ಹಾಗೂ ಪೆಟ್ರೋಲ್ ಸರ್ವಿಸ್ ಸ್ಟೇಷನ್ ಗಳು ದೊಡ್ಡ ಭ್ರಷ್ಟಾಚಾರವನ್ನು ಎಸಗಿದ್ದಾರೆ.
ಕಾರಿಗೆ ಪೆಟ್ರೋಲ್‌ ಹಾಕಿಸುವಾಗ ಸಂಬಂಧಪಟ್ಟ ಇಲಾಖೆಯ ಮೊಹರು ಇರಬೇಕು ಹಾಗೂ ಇಲಾಖೆಯ ಮುಖ್ಯಸ್ಮರ ಸಹಿ ಇರಬೇಕು. ಆದರೆ, ಅಲ್ಪಸಂಖ್ಯಾತ, ಹಜ್ ಮತ್ತು ವಕ್ಸ್ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಮನೋಜ್‌ ಕುಮಾರ್ ಅವರ ವಾಹನ ಸಂ KA 01 GB 9990 ಗೆ ಇಂಡೆಂಟ್ ಗಳು ಇಲ್ಲದಿದ್ದರೂ ಪೆಟ್ರೋಲ್ ತುಂಬಿಸಲಾಗಿರುವುದನ್ನು ಮಾಧ್ಯಮಗಳು ದಾಖಲೆ ಸಮೇತ ಬಯಲು ಮಾಡಿವೆ. ಕೇವಲ ಐದು ತಿಂಗಳಲ್ಲಿ ಈ ವಾಹನಕ್ಕೆ 390 ಲೀಟರ್ ಪೆಟ್ರೋಲ್ ತುಂಬಿಸಲಾಗಿದೆ. ಚಾಲಕ ಮಹೇಶ್ ಎನ್ ಎಂಬುವವರು 2023 ಡಿಸೆಂಬರ್, 2014 ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಮೇ ತಿಂಗಳ ಇಂಧನವಿಂದ ಬಿಲ್ ಗಳಲ್ಲಿ ವ್ಯತ್ಯಯ ಆಗಿರುವುದು ಗೊತ್ತಾಗಿದೆ. ಈ ಸಂಬಂಧ ಮಾಧ್ಯಮವೊಂದು ಬಿಡುಗಡೆ ಮಾಡಿರುವ ದಾಖಲೆಯನ್ನು ಈ ಪತ್ರದ ಮೂಲಕ ಲಗತ್ತಿರಿಸುತ್ತೇನ.
ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರಿಗೆ ಒದಗಿಸಿರುವ ವಾಹನಗಳಿಗೆ ದಿನಂಪ್ರತಿ ಇಷ್ಟೇ ಪ್ರಮಾಣದಲ್ಲಿ ಪೆಟ್ರೋಲ್ ಹಾಕಿಸಬೇಕೆಂದು ಯಾವುದೇ ನಿಯಮ ಅಥವಾ ಮಿತಿ ಇರುವುದಿಲ್ಲ ತಾವು ಕೂಡಲೇ ಪ್ರಧಾನ ಕಾರ್ಯದರ್ಶಿಗಳೂ ಸೇರಿ ಸರ್ಕಾರದ ವಾಹನ ಬಳಸುವ ಎಲ್ಲರಿಗೂ ಇಂಧನ ವನ್ನು ಬಳಸಲು ಒಂದು ಮಾರ್ಗಸೂಚಿಯನ್ನು ಸರ್ಕಾರದ ವತಿಯಿಂದ ಹೊರಡಿಸಬೇಕು ಹಾಗೂ ಮೂರು ತಿಂಗಳಿಗೊಮ್ಮೆ ವಾಹನ ಕ್ರಮಿಸಿರುವ ಕಿಲೋಮೀಟರ್ ಮತ್ತು ಉಪಯೋಗಿಸಿರುವ ಇಂಧನ ವನ್ನು ಆಡಿಟ್ ಮಾಡಬೇಕೆಂದು ಮನವಿ, ತನ್ಮೂಲಕ ದುರುಪಯೋಗ ಮಾಡಿಕೊಳ್ಳುವುದನ್ನು ತಪ್ಪಿಸಬಹುದು, ದಯವಿಟ್ಟು ತಾವು ಸರ್ಕಾರದ ಎಲ್ಲ ಇಲಾಖೆಗಳಿಗೂ ನೀಡಿರುವ ವಾಹನಗಳಿಗೆ 'ಇಂಧನ ನೀತಿ ಮಾರ್ಗಸೂಚಿಯನ್ನು' ಪರಿಚಯಿಸಿ ಸರ್ಕಾರದ ಹಣವನ್ನು ಕೆಲ ಪಟ್ಟಭದ್ರರು, ಭ್ರಷ್ಟ ನೌಕರರು, ಚಾಲಕರು ದುರುಪಯೋಗ ಮಾಡಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರುತ್ತೇನೆ ಎಂದಿದ್ದಾರೆ.

Tags :