For the best experience, open
https://m.samyuktakarnataka.in
on your mobile browser.

ವಿಕಸಿತ ಭಾರತ ಬಿಜೆಪಿಗೆ ಮತ: ಸಭೆ ಕಾರ್ಯತಂತ್ರ

01:02 AM Feb 19, 2024 IST | Samyukta Karnataka
ವಿಕಸಿತ ಭಾರತ ಬಿಜೆಪಿಗೆ ಮತ  ಸಭೆ ಕಾರ್ಯತಂತ್ರ

ನವದೆಹಲಿ: ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ನಡೆದ ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಭಾನುವಾರ ಮುಕ್ತಾಯಗೊಂಡಿದೆ.
ಮಹಿಳೆಯರು, ಯುವಕರು ಮತ್ತು ಬಡವರ ಸಮೀಕರಣಕ್ಕೆ ಒತ್ತು ನೀಡಿರುವ ಸಮಾವೇಶದಲ್ಲಿ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಸಂಪರ್ಕದಲ್ಲಿಟ್ಟುಕೊಳ್ಳಲು ಮತ್ತು ಎಲ್ಲ ಸಮುದಾಯದವರನ್ನು ಸೆಳೆಯಲು ಕಾರ್ಯಕರ್ತರಿಗೆ ದಿಕ್ಕು ನೀಡಲಾಗಿದೆ. ಸರ್ಕಾರದ ೧೦ ವರ್ಷಗಳ ಸಾಧನೆ ಮತ್ತು ಮುಂದಿನ ೨೫ ವರ್ಷಗಳಲ್ಲಿ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡುವ ಗುರಿಯನ್ನು ಮತದಾರರ ಮುಂದಿಟ್ಟು ಮತ ಕೇಳುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿರುವ ಆರ್ಥಿಕ ದುಸ್ಥಿತಿ ಕುರಿತು ಸಭೆಯಲ್ಲಿ ಶ್ವೇತಪತ್ರ ಬಿಡುಗಡೆ ಮಾಡಲಾಗಿದೆ. ಸಮಾವೇಶದಲ್ಲಿ ಎಲ್ಲ ಕೇಂದ್ರ ಮತ್ತು ಬಿಜೆಪಿಯ ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಶಾಸಕರು, ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳನ್ನು ಒಳಗೊಂಡ ೧೧,೫೦೦ ಕಾರ್ಯಕರ್ತರು ಭಾಗವಹಿಸಿದ್ದರು.
ವಿಕಸಿತ ಭಾರತ- ಮೋದಿ ಗ್ಯಾರಂಟಿ ಎನ್ನುವ ರಾಜಕೀಯ ನಿರ್ಣಯಕ್ಕೆ ಶನಿವಾರ ಅನುಮೋದನೆ ನೀಡಿದರೆ, ಭಾನುವಾರ ರಾಮ ಮಂದಿರ ನಿರ್ಮಾಣ ಮುಂದಿನ ೧೦೦೦ ವರ್ಷಗಳ ರಾಮರಾಜ್ಯದ ಮುನ್ಸೂಚನೆ ಎನ್ನುವ ನಿರ್ಣಯವನ್ನು ಕೈಗೊಳ್ಳಲಾಗಿದೆ.