For the best experience, open
https://m.samyuktakarnataka.in
on your mobile browser.

ವಿಜಯಪುರ- ಮಂಗಳೂರ ವಿಶೇಷ ಎಕ್ಸಪ್ರೆಸ್ ರೈಲು

03:18 PM Mar 26, 2024 IST | Samyukta Karnataka
ವಿಜಯಪುರ  ಮಂಗಳೂರ ವಿಶೇಷ ಎಕ್ಸಪ್ರೆಸ್ ರೈಲು

ಪರಿಷ್ಕೃತ ವೇಳಾಪಟ್ಟಿ: ರೈಲುಗಳ ಸೇವೆ ಮುಂದುವರಿಕೆ: ನೈಋತ್ಯ ರೈಲ್ವೆ

ಹುಬ್ಬಳ್ಳಿ : ವಿಜಯಪುರ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ದೈನಂದಿನ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಖ್ಯೆ 07377/07378 ಪರಿಷ್ಕೃತ ವೇಳಾಪಟ್ಟಿಯೊಂದಿಗೆ ರೈಲುಗಳ ಸೇವೆಯನ್ನು ಮುಂದುವರಿಸಲಾಗುತ್ತಿದೆ. ಅಸ್ತಿತ್ವದಲ್ಲಿರುವ ಬೋಗಿಗಳ ಸಂಯೋಜನೆ ಮತ್ತು ಶುಲ್ಕದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ರೈಲುಗಳ ವಿಸ್ತರಣೆಯ ವಿವರ ಈ ಕೆಳಗಿನಂತಿವೆ:

  1. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಏಪ್ರಿಲ್ 1 ರಿಂದ ಸೆಪ್ಟೆಂಬರ್ 30, 2024 ರವರೆಗೆ ವಿಸ್ತರಣೆ ಮಾಡಲಾಗುತ್ತಿದೆ. ಈ ಮೊದಲು ಇದೆ ತಿಂಗಳ 31 ರವರೆಗೆ ಸೂಚಿಸಲಾಗಿತ್ತು.
  2. ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಏಪ್ರಿಲ್ 2 ರಿಂದ ಅಕ್ಟೋಬರ್ 1, 2024 ರವರೆಗೆ ವಿಸ್ತರಣೆ ಮಾಡಲಾಗುತ್ತಿದೆ. ಈ ಮೊದಲು ಏಪ್ರಿಲ್ 1, 2024 ರವರೆಗೆ ಸೂಚಿಸಲಾಗಿತ್ತು.
    ರೈಲು ಸಂಖ್ಯೆ 07377/07378 ವಿಜಯಪುರ - ಮಂಗಳೂರು ಜಂಕ್ಷನ್ - ವಿಜಯಪುರ ವಿಶೇಷ ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದ ನಂತರ, ರೈಲುಗಳ ಸಂಖ್ಯೆ 07338 ಗುಂತಕಲ್-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ಮತ್ತು ರೈಲು ಸಂಖ್ಯೆ 06484 ಕಬಕಪುತ್ತೂರು-ಮಂಗಳೂರು ಸೆಂಟ್ರಲ್ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳ ವೇಳಾಪಟ್ಟಿಯನ್ನು ಏಪ್ರಿಲ್ 1, 2024 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
    ಈ ರೈಲುಗಳ ಪರಿಷ್ಕೃತ ವೇಳಾಪಟ್ಟಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ https://swr.indianrailways.gov.in/view_detail.jsp?lang=0&dcd=7330&id=0,4,268 ಮೇಲೆ ಕ್ಲಿಕ್ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು.
    ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಹಾಯವಾಣಿ ಸಂಖ್ಯೆ 139 ಗೆ ಸಂಪರ್ಕಿಸಿ ಅಥವಾ ಭಾರತೀಯ ರೈಲ್ವೆ ವೆಬ್ ಸೈಟ್ www.enquiry.indianrail.gov.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು
    ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.