ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿಜಯಪುರ ಯುವಕನ ಪ್ರಕರಣ ಪ್ರಸ್ತಾಪಿಸಿದ ಮೋದಿ

04:46 PM Oct 27, 2024 IST | Samyukta Karnataka

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮನ್ ಕೀ ಬಾತ್‌ನಲ್ಲಿ ವಿಜಯಪುರದಲ್ಲಿ ನಡೆದ ಡಿಜಿಟಲ್ ವಂಚನೆಯ ಕುರಿತ ಘಟನೆಯ ಉದಾಹರಣೆಯೊಂದಿಗೆ ಡಿಜಿಟಲ್ ವಂಚನೆ ಹಾಗೂ ಅಪರಾಧ ಕುರಿತಂತೆ ಡಿಜಿಟಲ್ ವಂಚನೆಗಳ ಬಗ್ಗೆ ಜಾಗರೂಕರತೆಗೆ ಸಲಹೆ ನೀಡಿದ್ದಾರೆ. ಸೈಬರ್​​ ವಂಚಕನೋರ್ವ ವಿಜಯಪುರ ಸಂತೋಷ್ ಚೌದರಿಗೆ ವಿಡಿಯೋ ಕಾಲ್ ಮೂಲಕ ಪೊಲೀಸ್ ತನಿಖೆ ನೆಪಹೇಳಿ ನಿಮ್ಮ ಮೊಬೈಲ್ ನಂಬರ್ ವಿರುದ್ಧ 17 ಕೇಸ್ ದಾಖಲಾಗಿವೆ. ಮೊಬೈಲ್‌ ಸಂಖ್ಯೆ ಬಂದಮಾಡಲಾಗುತ್ತಿದೆ, ನಿಮ್ಮ ಆದಾರ ಕಾರ್ಡ್‌ ಪ್ರತಿಯನ್ನು ತೋರಿಸಿ ಎಂದು ಕೇಳಿದ್ದಾರೆ, ವಿಚಾರಣೆಗೆ ಹಾಜರಾಗಲು ಮುಂಬೈಗೆ ಬನ್ನಿ ಎಂದು ವಂಚಕ ಸಂತೋಷ್ ಚೌದರಿಗೆ ಹೇಳಿದ್ದಾನೆ. ಅಶ್ಲೀಲವಾಗಿ ನಿಂದಿಸಿ ನಕಲಿ ಪೊಲೀಸ್ ಅಧಿಕಾರಿ ಸಂತೋಷ್​ಗೆ ಬೆದರಿಕೆ ಹಾಕಿದ್ದಾನೆ. ಆಧಾರ್ ನಂಬರ್ ಕೆಲ ಓಟಿಪಿ ಪಡೆಯಲು ವಂಚಕ ಯತ್ನಿಸಿದ್ದಾನೆ. ಕ್ರೈಂ ಬ್ಯಾಂಚ್ ಪೊಲೀಸರ ಯೂನಿಫಾರ್ಮ್‌ನಲ್ಲಿ ಕಾಲ್ ಮಾಡಿದ್ದ ಎನ್ನಲಾಗಿದ್ದು, ಇದರ ಸಂಪೂರ್ಣ ದೃಶ್ಯವನ್ನ ಸಂತೋಷ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಈ ಬಗ್ಗೆ ಸಂತೋಷ್ ವಿಜಯಪುರ ಸೆನ್ ಠಾಣೆಗೆ ದೂರು ನೀಡಿದ್ದರು.
ಪ್ರತಿಯೊಬ್ಬ ನಾಗರಿಕರೂ ಡಿಜಿಟಲ್ ವಂಚನೆಗಳ ಬಗ್ಗೆ ಜಾಗರೂಕರಾಗುವುದು ಅತಿ ಮುಖ್ಯ. ಡಿಜಿಟಲ್ ವಂಚನೆ ಹಾಗೂ ಅಪರಾಧಗಳನ್ನು ಮಾಡುತ್ತಿರುವವರೆಲ್ಲಾ ಸಮಾಜದ ಶತ್ರುಗಳು. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟಲು ಎಲ್ಲಾ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿವೆ. ಈ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರಗಳನ್ನು ರಚಿಸಲಾಗಿದೆ. ಇಂತಹ ವಂಚನೆಗಳನ್ನು ಮಾಡುವ ಸಾವಿರಾರು ವಿಡಿಯೋ ಕಾಲ್, ಐಡಿಗಳನ್ನು ಈ ಏಜೆನ್ಸಿಗಳ ಮೂಲಕ ನಿರ್ಬಂಧಿಸಲಾಗಿದೆ. ಲಕ್ಷಾಂತರ ಸಿಮ್ ಕಾರ್ಡ್, ಮೊಬೈಲ್ ಫೋನ್ ಮತ್ತು ಬ್ಯಾಂಕ್ ಖಾತೆಗಳನ್ನೂ ಸಹ ತಡೆ ಹಿಡಿಯಲಾಗಿದೆ. ನೀವೂ ಜಾಗರೂಕರಾಗಿ, ಸೇಫ್ ಡಿಜಿಟಲ್ ಇಂಡಿಯಾ ಹ್ಯಾಶ್ ಟ್ಯಾಗ್ ಅನ್ನು ಬಳಕೆ ಮಾಡಿಕೊಂಡು ಸೈಬರ್ ಹಗರಣದ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ದೇಶದ ಎಲ್ಲಾ ನಾಗರಿಕರಿಗೂ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

Tags :
#ಡಿಜಿಟಲ್ ಅರೆಸ್ಟ್#ನರೇಂದ್ರಮೋದಿ#ವಿಜಯಪುರ
Next Article