ವಿಜಯಪುರ ರೈತರಿಗೆ ವಕ್ಫ್ ನೋಟಿಸ್: ಇಲಾಖೆ ಪರಿಶೀಲನೆ ನಡೆಸಲಿದೆ
ಶಿವಮೊಗ್ಗ: ವಿಜಯಪುರ ಜಿಲ್ಲೆಯ ಹೊನವಾಡದಲ್ಲಿ ಕೆಲವು ರೈತರಿಗೆ ವಕ್ಸ್ ಬೋರ್ಡ್ ತನ್ನ ಆಸ್ತಿ ಎಂದು ನೋಟಿಸ್ ನೀಡಿದ್ದರ ಬಗ್ಗೆ ಕಂದಾಯ ಇಲಾಖೆ ಪರಿಶೀಲನೆ ನಡೆಸಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ನೂತನ ಪೊಲೀಸ್ ಸಮುದಾಯ ಭವನ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು 'ವಕ್ಸ್ ಬೋರ್ಡ್ ನೀಡಿದ ನೋಟಿಸ್ ಬಗ್ಗೆ ಎಲ್ಲಾ ಪರಿಶೀಲನೆ ಮಾಡುತ್ತೇವೆ. ಸರ್ಕಾರ, ಕಂದಾಯ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಲಿದೆ. ಪರಿಶೀಲನೆ ಮಾಡಿ ಅದರಲ್ಲಿ ಹಳೆಯ ರೆಕಾರ್ಡ್ ಗಳೇನಿದೆ ಅದರ ಆಧಾರದ ಮೇಲೆ ನಿರ್ಧಾರ ಮಾಡುತ್ತಾರೆ ಎಂದರು.
ಹೆಚ್‍ಎಮ್‍ಟಿ ಭೂಮಿ ಅರಣ್ಯ ಇಲಾಖೆ ವಶ : ಹಿಂದೆ ಹೆಚ್‍ಎಮ್‍ಟಿ ಜಾಗವೆಲ್ಲಾ ಅರಣ್ಯ ಇಲಾಖೆಗೆ ಸೇರಿತ್ತು. ಹೆಚ್ಎಂಟಿ ಕಾರ್ಖಾನೆ ಮುಚ್ಚಿಹೋಗಿರುವುದರಿಂದ, ಇದೀಗ ಆ ಜಾಗ ಖಾಲಿ ಇದ್ದ ಕಾರಣ ಮತ್ತೆ ಇಲಾಖೆ ವಶಕ್ಕೆ ಪಡೆದಿದೆ.
ನಾವು ಗೆಲ್ಲೋದಷ್ಟೇ ನಮಗೆ ಮುಖ್ಯ: ಮೂರು ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ, ಎಲ್ಲಾ ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿದ್ದರೂ ಸಹ ರಾಜ್ಯದಲ್ಲಿ ಕಾಂಗ್ರೆಸ್ ಜನಪರ ಕೆಲಸ ಮಾಡ್ತಿದೆ. ಬಡ ಜನರಿಗೆ ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತಿದ್ದೇವೆ ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ಮಾಡಿದ್ದಾರೆ. ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದು ನಮಗೆ ಮುಖ್ಯ ಅಲ್ಲ. ನಾವು ಗೆಲ್ಲೋದಷ್ಟೇ ನಮಗೆ ಮುಖ್ಯ. ಅದಕ್ಕೆ ಬೇಕಾದ ರಣ ನೀತಿಯನ್ನು ನಾವು ಮಾಡ್ತೀವಿ. ಅವರು ಯಾರನ್ನಾದರೂ ನಿಲ್ಲಿಸಿಕೊಳ್ಳಲಿ ಎಂದಿದ್ದಾರೆ.