ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿಜಯೇಂದ್ರ ನೇತೃತ್ವದ ಚುನಾವಣೆಯಲ್ಲಿ ಭಾಗವಹಿಸಲ್ಲ

01:22 PM Oct 28, 2024 IST | Samyukta Karnataka

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವದ ನೇತೃತ್ವದಲ್ಲಿ ನಡೆಯುವ ಚುನಾವಣೆಯಲ್ಲಿ ನಾನು ಭಾಗವಹಿಸುವುದಿಲ್ಲ. ಉಪಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಸೋಮವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ವಿಜಯೇಂದ್ರ ನಾಯಕತ್ವ ನಾನು ಒಪ್ಪುವುದಿಲ್ಲ. ಮಹಾರಾಷ್ಟ್ರ ಚುನಾವಣೆಯಲ್ಲಿ ನನಗೆ ಜವಾಬ್ದಾರಿ ಬೇಡಾ, ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಕೊಡಿ ಅವರ ಜೊತೆ ಸೇರಿ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದೇನೆ. ಅಕ್ಕಲಕೋಟ, ಸೋಲಾಪುರ, ಜತ್ತ ಸೇರಿದಂತೆ ಕನ್ನಡದ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಹೇಳಿದ್ದರು. ನಾನು ನೀರಾವರಿ ಇಲಾಖೆ ಸಚಿವನಾಗಿದ್ದಾಗ ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.

ಫುಲ್‌ ಟೈಮ್ ಸಚಿವರ ನೇಮಕ ಮಾಡಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪಾಟ್೯ ಟೈಮ್ ನೀರಾವರಿ ಸಚಿವ ಹೆಚ್ಚಿನ ಸಮಯ ಬಿಬಿಎಂಪಿಯಲ್ಲಿಯೇ ಮಹತ್ವ ಕೊಡುತ್ತಾರೆ. ದಯಮಾಡಿ ಫುಲ್‌ ಟೈಮ್ ನೀರಾವರಿ ಸಚಿವರನ್ನು ಸರಕಾರ ನೇಮಕ ಮಾಡಬೇಕೆಂದರು.

ಯೋಗೇಶ್ವರಗೆ ಅನ್ಯಾಯವಾಯಿತು: ಬಿಜೆಪಿ ತೋರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಸಿ.ಪಿ.ಯೋಗೇಶ್ವರ ಒಳ್ಳೆಯ ಹೋರಾಟಗಾರ. ಅವನಿಗೆ ಅನ್ಯಾಯವಾಯಿತು. ಅದಕ್ಕೆ ಕಾಂಗ್ರೆಸ್ ಹೋಗಿ ಚನ್ನಪಟ್ಟಣದ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾನೆ. ಗೆಲ್ಲುತ್ತಾನೋ ಸೋಲುತ್ತಾನೋ ಗೊತ್ತಿಲ್ಲ ಎಂದರು‌.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮಹೇಶ ಕುಮಠಳ್ಳಿ ಇದ್ದರು‌.

Tags :
#ಉಪಚುನಾವಣೆ#ಬಿಜೆಪಿ#ಬೆಳಗಾವಿ#ಯೋಗೇಶ್ವರ್‌#ರಮೇಶಜಾಕಿಹೋಳಿ#ವಿಜಯೇಂದ್ರ
Next Article