ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿದ್ಯಾರ್ಥಿನಿಗೆ ಮೋದಿ ಭಾವನಾತ್ಮಕ ಪತ್ರ

07:00 AM May 14, 2024 IST | Samyukta Karnataka

ಬಾಗಲಕೋಟೆ: ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಾಯಿ ಹಿರಾಬೇನ್ ಅವರೊಂದಿಗಿನ ತಮ್ಮ ಚಿತ್ರವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಚಿತ್ರ ಬಿಡಿಸಿದ್ದ ವಿದ್ಯಾರ್ಥಿನಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಏ. ೨೯ರಂದು ಬಾಗಲಕೋಟೆಯ ನವನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಡಿಪ್ಲೊಮಾ ವಿದ್ಯಾರ್ಥಿನಿ ನಾಗರತ್ನ ಮೇಟಿ ಅವರು ಪ್ರಧಾನಿ ಮೋದಿ ಅವರ ಸಮಾವೇಶದಲ್ಲಿ ತಾವು ಬಿಡಿಸಿದ್ದ ಚಿತ್ರ ಹೊತ್ತು ನಿಂತು ಮೋದಿ ಅವರ ಗಮನ ಸೆಳೆದಿದ್ದರು. ಚಿತ್ರ ಕಂಡು ಎಸ್‌ಪಿಜಿ ಕಮಾಂಡೋಗಳ ಬಳಿಯಿಂದ ಚಿತ್ರ ತರೆಸಿಕೊಂಡಿದ್ದ ಮೋದಿ ಅವರು ಅದರೊಂದಿಗೆ ಆಕೆಗೆ ಹೆಸರು, ವಿಳಾಸವನ್ನು ನೀಡುವಂತೆ ಕೋರಿದ್ದರು. ಸಮಾವೇಶ ನಡೆದ ೧೫ ದಿನದಲ್ಲಿ ನಾಗರತ್ನಾಗೆ ಮೋದಿ ಅವರಿಂದ ಪತ್ರ ತಲುಪಿದ್ದು, ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ನಾಗರತ್ನಾಗೆ ಬರೆದಿರುವ ಪತ್ರದಲ್ಲಿ ಸುಂದರವಾದ ಕಲಾಕೃತಿ ನೀಡಿದಕ್ಕೆ ಕೃತಜ್ಞತೆಗಳು. ಮನುಷ್ಯ ಭಾವನೆಗಳನ್ನು ಹಿಡಿದಿಡುವ, ಅದರ ಬೆಲೆಯನ್ನು ಅರಿಯುವ ಗುಣವನ್ನು ನಿಮ್ಮಲ್ಲಿ ಬಿತ್ತಿರುವ ನಿಮ್ಮ ಕುಟುಂಬಕ್ಕೂ ನನ್ನ ಧನ್ಯವಾದಗಳು.
ಸಮಾವೇಶದಲ್ಲಿ ನಿಮ್ಮ ಕಲಾಕೃತಿಯು ಗಮನಸೆಳೆದಿದ್ದು, ಯುವಶಕ್ತಿಯಲ್ಲಿನ ಆಸಕ್ತಿಯನ್ನು ಪ್ರತಿನಿಧಿಸಿದೆ, ನವ ಭಾರತ ಮತ್ತು ಯುವ ಸಮೂಹಕ್ಕಾಗಿ ಮತ್ತಷ್ಟು ದುಡಿಯಲು ನನಗೆ ಈ ಘಟನೆ ಪ್ರೇರೇಪಣೆ ನೀಡಿದೆ ಎಂದು ಮೋದಿ ಹೇಳಿದ್ದು ವಿದ್ಯಾರ್ಥಿನಿಯ ಉಜ್ವಲ ಭವಿಷ್ಯಕ್ಕೆ ಶುಭಕೋರಿದ್ದಾರೆ.
ಮೇ ೧೩ರ ಸೋಮವಾರ ಬೆಳಗ್ಗೆ ನಾಗರತ್ನಾ ಮೇಟಿ ಅವರ ಮನೆಗೆ ಈ ಪತ್ರ ತಲುಪಿದೆ.

Next Article