ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ೨೯ ತಾಸು ನಿರಂತರ ಚಿತ್ರಹಿಂಸೆ

11:27 PM Apr 07, 2024 IST | Samyukta Karnataka

ನವದೆಹಲಿ: ಕೇರಳದ ವಯನಾಡ್ ಜಿಲ್ಲೆಯ ೨೦ ಪಶುಸಂಗೋಪನಾ ವಿವಿಯ ವಿದ್ಯಾರ್ಥಿಗೆ ೨೯ ತಾಸುಗಳ ಕಾಲ ನಿರಂತರವಾಗಿ ಹಿರಿಯರು ಹಾಗೂ ಸಹಪಾಠಿಗಳು ಚಿತ್ರಹಿಂಸೆ ನೀಡಿದ್ದರಿಂದ ಆತ ದೈಹಿಕ ಹಾಗೂ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡನೆಂದು ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಡಪಂಥೀಯ ವಿದ್ಯಾರ್ಥಿ ಸಂಘಟನೆಯವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂಬ ಆರೋಪ ಕೇಳಿ ಬಂದ ನಂತರ ರಾಜ್ಯಸರ್ಕಾರ ಈಗ ಪ್ರಕರಣವನ್ನು ಸಿಬಿಐ ತನಿಖಾ ಸಂಸ್ಥೆಗೆ ವಹಿಸಿದೆ.
ವಿದ್ಯಾರ್ಥಿ ಜೆ.ಎಸ್.ಸಿದ್ದಾರ್ಥನ್‌ನ ಮೃತದೇಹ ಫೆ.೧೮ರಂದು ಹಾಸ್ಟೆಲ್‌ನ ಸ್ನಾನಗೃಹದಲ್ಲಿ ಪತ್ತೆಯಾಗಿತ್ತು. ಈ ನತದೃಷ್ಟನ ವಿರುದ್ಧ ಫೆ.೧೬ರ ಬೆಳಗ್ಗೆ ೯ರಿಂದ ಆರಂಭಿಸಿ ಫೆ.೧೭ರ ಮಧ್ಯಾಹ್ನ ೨ರವರೆಗೂ ಕೈ ಹಾಗೂ ಬೆಲ್ಟ್ ಬಳಸಿ ಕ್ರೂರ ರೀತಿಯಲ್ಲಿ ದೌರ್ಜನ್ಯ ಎಸಗಲಾಗಿದೆ. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಸಿದ್ದಾರ್ಥನ್, ತಾನು ಇನ್ನು ಈ ಸಂಸ್ಥೆಯಲ್ಲಿ ಅಧ್ಯಯನ ಮುಂದುವರಿಸುವುದು ಅಸಾಧ್ಯ ಹಾಗೂ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ಹೋಗುವುದು ಅಸಾಧ್ಯ ಎಂದೆಲ್ಲಾ ತೀರ್ಮಾನಕ್ಕೆ ಬಂದು ಫೆ.೧೮ರ ಮಧ್ಯಾಹ್ನ ೧೨.೩೦ರಿಂದ ೧.೪೫ರ ನಡುವೆ ಸ್ನಾನಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ಪೊಲೀಸರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಬಿದ್ದ ಕೆಲವೇ ಗಂಟೆಯೊಳಗೆ ಕಳೆದ ಶುಕ್ರವಾರ ರಾತ್ರಿ ಸಿಬಿಐ ಅಧಿಕಾರಿಗಳು, ೨೦ ಮಂದಿ ಆರೋಪಿಗಳ ವಿರುದ್ಧ ವಯನಾಡಿನ ವೈಯತ್ರಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ(ಎಫ್‌ಐಆರ್)ಯನ್ನು ಮತ್ತೊಮ್ಮೆ ದಾಖಲಿಸಿದ್ದಾರೆ.
ರಾಜ್ಯ ರಾಜಕೀಯ ವಲಯದಲ್ಲಿ ಈ ಪ್ರಕರಣ ಭಾರಿ ಕೋಲಾಹಲವೆಬ್ಬಿಸಿದ ನಂತರ ಇದನ್ನು ಸಿಬಿಐಗೆ ವಹಿಸುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾ.೯ರಂದು ಭರವಸೆ ನೀಡಿದ್ದರು.
ಆದರೂ ಕೆಲವು ವಾರಗಳವರೆಗೆ ಪ್ರಕರಣದ ಪ್ರಮುಖ ಕಡತಗಳನ್ನು ಸಿಬಿಐಗೆ ವಹಿಸದಿದ್ದ ನಂತರ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ಆರೋಪಗಳ ಸುರಿಮಳೆಗೆರೆದವು.

Next Article