ವಿರಕ್ತ ಮಠದ ಪಕ್ಕದಲ್ಲಿ ಮಸೀದಿ ಕಟ್ಟುವ ಯೋಜನೆ
ಮಠ ಮಾನ್ಯಗಳು ಹಿಂದೂ ಸಂಪ್ರದಾಯದ ಅವಿಭಾಜ್ಯ ಅಂಗ. ಈಗ ವಕ್ಫ್ ಹೆಸರಲ್ಲಿ ವಿರಕ್ತ ಮಠದ ಜಾಗ ನಮ್ಮದು ಎಂದು ಕೇಳುತ್ತಿರುವುದು ಯಾವ ರೀತಿಯಾದ ನ್ಯಾಯ ?
ಬೆಂಗಳೂರು: ಅನ್ನ, ಅಕ್ಷರ, ಆಶ್ರಯ, ಆರೋಗ್ಯವನ್ನು ನೀಡುತ್ತಿರುವ ಮಠಗಳು ಸಹ ನಮ್ಮ ಆಸ್ತಿ ಎಂದು ವಕ್ಫ್ ಮಂಡಳಿ ಹೇಳಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸುತ್ತೂರು, ಸಿದ್ಧಗಂಗೆ, ಸಿದ್ದಾರೂಢ, ಚುಂಚನಗಿರಿ ಸೇರಿದಂತೆ ನೂರಾರು ಮಠಗಳು ಧಾರ್ಮಿಕ ಕಾರ್ಯಗಳೊಂದಿಗೆ ಅಕ್ಷರದ ಕ್ರಾಂತಿ ಹರಡುತ್ತಿವೆ; ಸಂಸ್ಕೃತಿ, ಸದಾಚಾರವನ್ನು ಹೇಳಿಕೊಡುತ್ತಿದೆ. ಮಠ ಮಾನ್ಯಗಳು ಹಿಂದೂ ಸಂಪ್ರದಾಯದ ಅವಿಭಾಜ್ಯ ಅಂಗ. ಈಗ ವಕ್ಫ್ ಹೆಸರಲ್ಲಿ ವಿರಕ್ತ ಮಠದ ಜಾಗ ನಮ್ಮದು ಎಂದು ಕೇಳುತ್ತಿರುವುದು ಯಾವ ರೀತಿಯಾದ ನ್ಯಾಯ ? ವಿರಕ್ತ ಮಠದ ಪಕ್ಕದಲ್ಲಿ ಮಸೀದಿ ಕಟ್ಟುವ ಯೋಜನೆಯನ್ನು ವಕ್ಫ್ ಹಮ್ಮಿಕೊಂಡಿದೆಯೇ ಅಥವಾ ದೇಶದ ಸಂಸ್ಕೃತಿಯನ್ನು ನಾಶ ಪಡಿಸಲು ನಮ್ಮ ಮಠಗಳನ್ನು ಟಾರ್ಗೆಟ್ ಮಾಡಿದೆಯಾ ಎಂಬುದನ್ನು ಸ್ಪಷ್ಟ ಪಡಿಸಲಿ ಎಂದಿದ್ದಾರೆ.