For the best experience, open
https://m.samyuktakarnataka.in
on your mobile browser.

ವಿರಾಟ್ ಕೊಹ್ಲಿ ಶ್ರೀಮಂತ ಕ್ರಿಕೆಟ್ ಪಟು

11:55 PM Sep 05, 2024 IST | Samyukta Karnataka
ವಿರಾಟ್ ಕೊಹ್ಲಿ ಶ್ರೀಮಂತ ಕ್ರಿಕೆಟ್ ಪಟು

ನವದೆಹಲಿ: ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲ, ದೇಶದ ಆದಾಯ ತೆರಿಗೆಯಲ್ಲೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ೨೦೨೩-೨೪ನೇ ಸಾಲಿನಲ್ಲಿ ಕ್ರಿಕೆಟರ್ ವಿರಾಟ್ ಬರೋಬ್ಬರಿ ೬೬ ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದು, ಕ್ರೀಡಾಪಟುಗಳ ಪೈಕಿ ಅತಿ ಹೆಚ್ಚು ತೆರಿಗೆ ಕಟ್ಟಿದ ಅಥ್ಲೀಟ್ ಎನ್ನಿಸಿಕೊಂಡಿದ್ದಾರೆ. ಬಾಲಿವುಡ್, ಕಾಲಿವುಡ್ ಶ್ರೇಷ್ಠ ನಟರು ಸೇರಿ ಅತ್ಯಂತ ಹೆಚ್ಚು ತೆರಿಗೆ ಪಾವತಿಸಿದವರ ಪಟ್ಟಿಯಲ್ಲಿ ೫ನೇ ಸ್ಥಾನ ಪಡೆದಿರುವ ವಿರಾಟ್ ಕೊಹ್ಲಿ, ಇಷ್ಟೊಂದು ದೊಡ್ಡ ಮೊತ್ತದ ತೆರಿಗೆ ಪಾವತಿಸುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾರೆ.
ಫಾರ್ಚೂನ್ ಇಂಡಿಯಾ ಬಿಡುಗಡೆಗೊಳಿಸಿದ ವರದಿಗಳ ಪ್ರಕಾರ ೨೦೨೪ನೇ ಸಾಲಿನ ಮಾರ್ಚ್ನಲ್ಲಿ ಕೊನೆಗೊಂಡ ಹಣಕಾಸು ವರ್ಷದಲ್ಲಿ, ಕೊಹ್ಲಿ ಇಷ್ಟೊಂದು ದೊಡ್ಡ ಮೊತ್ತದ ತೆರಿಗೆ ಪಾವತಿಸಿದ್ದಾರೆ ಎನ್ನಲಾಗಿದೆ.
ಭಾರತೀಯ ಕ್ರೀಡಾಪ್ರೇಮಿಗಳ ಪೈಕಿ ಮೊದಲ ಸ್ಥಾನದಲ್ಲಿರುವ ಕೊಹ್ಲಿ ತೆರಿಗೆಯಾಗಿ ಪಾವತಿಸಿದ್ದು ೬೬ ಕೋಟಿಯಾಗಿದ್ದು, ಇವರ ನಂತರ ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ೩೮ ಕೋಟಿ ತೆರಿಗೆ ಪಾವತಿಸುವ ಮೂಲಕ ದ್ವಿತೀಯ ಸ್ಥಾನ ಸಂಪಾದಿಸಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ೧೧ ವರ್ಷಗಳಾದರೂ, ಅವರ ಜನಪ್ರಿಯತೆ ಕುಸಿದಿಲ್ಲ ಎಂಬುದು ಸಾಬೀತಾಗಿದೆ. ಸಚಿನ್ ತೆಂಡುಲ್ಕರ್ ಕೂಡ ೨೮ ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದ್ದಾರೆ. ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಇದೇ ಸಾಲಿನಲ್ಲಿ ಅತ್ಯುತ್ತಮ ಲಾಭಾಂಶ ಕಂಡಿದ್ದು, ಒಟ್ಟು ೨೩ ಕೋಟಿ ರೂಪಾಯಿಗಳನ್ನು ತೆರಿಗೆಯಾಗಿ ಪಾವತಿಸಿದ್ದಾರೆ.
ಇದಾದ ನಂತರ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ರಿಷಬ್ ಪಂತ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಇತ್ತೀಚ್ಛೆಗಷ್ಟೇ ಒಟ್ಟು ೩೩೦ ಕೋಟಿಗಳ ಸರದಾರ ಎನ್ನಿಸಿಕೊಂಡಿದ್ದರು. ಆದರೆ, ಪಾಂಡ್ಯ ಒಟ್ಟು ೧೩ ಕೋಟಿ ರೂಪಾಯಿ ತೆರಿಗೆಯಾಗಿ ಪಾವತಿಸಿದ್ದು, ರಿಶಬ್ ಪಂತ್ ಈ ಪಟ್ಟಿಯಲ್ಲಿ ೧೦ ಕೋಟಿ ರೂ. ಟ್ಯಾಕ್ಸ್ ಕಟ್ಟಿದ್ದಾರೆ.
ಅತಿ ಹೆಚ್ಚು ತೆರಿಗೆ ಪಾವತಿಸುವ ಭಾರತೀಯ ಕ್ರೀಡಾಪಟುಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮಾತ್ರ ಸಾಕಷ್ಟು ಹಿಂದಿದ್ದಾರೆ. ತಂಡದ ನಾಯಕನಾಗಿದ್ದರೂ, ಆದಾಯದಲ್ಲಿ ಮಾತ್ರ ರಿಶಬ್ ಪಂತ್‌ಗಿಂತಲೂ ಕಡಿಮೆ ಎಂದು ಸಾಬೀತಾಗಿದೆ. ವಿರಾಟ್ ಕೊಹ್ಲಿ ಬಳಿಯೂ ಬಾರದ ರೋಹಿತ್, ಈ ವರ್ಷದಲ್ಲಿ ಕೇವಲ ೧೦ ಕೋಟಿ ರೂಪಾಯಿ ತೆರಿಗೆ ಸಲ್ಲಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸದ್ಯ ಕ್ರಿಕೆಟರ್‌ಗಳ ಪೈಕಿ, ಈ ೬ ಮಂದಿ ಮಾತ್ರ ಅತ್ಯಂತ ಹೆಚ್ಚು ತೆರಿಗೆ ಪಾವತಿಸಿದ ಅಥ್ಲೀಟ್‌ಗಳಾಗಿ ಗುರುತಿಸಿಕೊಂಡಿದ್ದಾರೆ.