For the best experience, open
https://m.samyuktakarnataka.in
on your mobile browser.

ವಿಶಿಷ್ಟ ಅಭಿಯಾನ: ಪ್ಲಾಸ್ಟಿಕ್ ತ್ಯಾಜ್ಯದ ಬದಲಾಗಿ ಸಕ್ಕರೆ…

10:24 AM Jul 20, 2024 IST | Samyukta Karnataka
ವಿಶಿಷ್ಟ ಅಭಿಯಾನ  ಪ್ಲಾಸ್ಟಿಕ್ ತ್ಯಾಜ್ಯದ ಬದಲಾಗಿ ಸಕ್ಕರೆ…

ವಿಶಿಷ್ಟ ಅಭಿಯಾನದ ಮೂಲಕ ಸ್ವಚ್ಛ, ಸುಸ್ಥಿರ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಯಾದಗಿರಿಯ ತಡಿಬಿಡಿ ಗ್ರಾಮ ಪಂಚಾಯತಿ!

ಬೆಂಗಳೂರು: ಪ್ಲಾಸ್ಟಿಕ್ ತ್ಯಾಜ್ಯದ ಬದಲಾಗಿ ಸಕ್ಕರೆ ವಿತರಿಸುವ ವಿಶಿಷ್ಟ ಅಭಿಯಾನ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಯಾದಗಿರಿ ಜಿಲ್ಲೆ ವಡಗೇರಾ ತಾಲ್ಲೂಕಿನ ತಡಿಬಿಡಿ ಗ್ರಾಮ ಪಂಚಾಯತಿಯು ತಮ್ಮ ಗ್ರಾಮದ ಜನತೆಗೆ 1 ಕೆ.ಜಿ. ಮರುಬಳಕೆ ಪ್ಲಾಸ್ಟಿಕ್ ತ್ಯಾಜ್ಯದ ಬದಲಾಗಿ ಒಂದು ಕೆ.ಜಿ ಸಕ್ಕರೆ ವಿತರಿಸುವ ವಿಶಿಷ್ಟ ಅಭಿಯಾನಕ್ಕೆ ಚಾಲನೆ ನೀಡಿದೆ. ಇದರಿಂದ ಕೇವಲ ಒಂದೇ ತಿಂಗಳಲ್ಲಿ ಗ್ರಾಮಸ್ಥರಿಂದ ಸುಮಾರು 30 ಕೆ.ಜಿಯಷ್ಟು ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಸಂಗ್ರಹಿಸಿದೆ. ಈ ವಿಶೇಷ ಅಭಿಯಾನ ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಈ ಅಭಿಯಾನ ಸಾರ್ವಜನಿಕರಿಗೂ ಲಾಭ ತಂದುಕೊಡುತ್ತಿದೆ. ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದಿಂದ ಸುಸ್ಥಿರ ಅಭಿವೃದ್ಧಿಯೂ ಸಾಧ್ಯವಾಗಿದೆ. ಒಂದು ಹೊಸ ಆಲೋಚನೆಯ ಮೂಲಕ ಹೇಗೆ ನಾವು ಸಮಾಜದಲ್ಲಿ ಬದಲಾವಣೆ ತರಬಹುದು ಎಂಬುದಕ್ಕೆ ಈ ಗ್ರಾಮಪಂಚಾಯತಿ ಉದಾಹರಣೆಯಾಗಿದೆ ಎಂದಿದ್ದಾರೆ.