ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿಶಿಷ್ಟ ಪರಂಪರೆ ಮಠ ಸ್ವರ್ಣವಲ್ಲೀ

11:53 PM Feb 18, 2024 IST | Samyukta Karnataka

ಶಿರಸಿ: ಸ್ವರ್ಣವಲ್ಲೀ ಮಠದ ಪರಂಪರೆ ಬಹಳ ವಿಶಿಷ್ಟವಾದ ಪರಂಪರೆ. ಶ್ರೀ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಸಮಾಜಮುಖಿಯಾಗಿ ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ. ಮಠದಲ್ಲಿ ಇದೇ ಭಾಗದವರು ಶಿಷ್ಯರಾಗಿ ಬಂದು ಮುನ್ನಡೆಸುವುದು ವಿಶೇಷ. ಅತ್ಯುತ್ತಮವಾದ ಕೆಲಸ ಮಾಡುತ್ತಿರುವ ಮಠ ಮತ್ತು ಶ್ರದ್ಧೆ, ಭಕ್ತಿ, ದೈವ ಭಕ್ತರು ಆದ ಶ್ರೀಗಳು ಇಂದಿನ ದಿನಗಳಲ್ಲಿ ಕಷ್ಟ ಸಾಧ್ಯವಾದ ಸಾಧನೆ ಮಾಡುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರು, ಲೋಕ ಶಿಕ್ಷಣ ಟ್ರಸ್ಟ್ನ ಧರ್ಮದರ್ಶಿಗಳಾದ ಅಶೋಕ ಹಾರನಹಳ್ಳಿ ಅವರು ಹೇಳಿದರು.
ಅವರು ರವಿವಾರ ಸಂಜೆ ತಾಲೂಕಿನ ಶ್ರೀ ಸೋಂದಾ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾಭವನದಲ್ಲಿ ಮಹಾಸಂಸ್ಥಾನದ ಶಿಷ್ಯ ಸ್ವೀಕಾರ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅನೇಕ ಮಠದಲ್ಲಿ ಅನೇಕ ಸಮಸ್ಯೆ ಕಂಡು ಬರುತ್ತದೆ. ಅದ್ಯಾವುದೇ ಸಮಸ್ಯೆ ಇಲ್ಲದೇ ಮುನ್ನಡೆಸುತ್ತಿರುವ ಶ್ರೀಗಳ ಮಾರ್ಗದರ್ಶನದಿಂದ ರಾಷ್ಟ್ರಮಟ್ಟದಲ್ಲಿ ಪ್ರಕಾಶಮಾನವಾಗಲಿ. ಶ್ರೀಗಳ ಮಾರ್ಗದರ್ಶನದಿಂದ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಶಕ್ತಿಯನ್ನು ಶ್ರೀಗಳು ತುಂಬಲಿ ಎಂದು ಆಶಿಸಿದರು.
ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೀಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಜೀಗಳು ಆಶೀರ್ವಚನ ನೀಡಿದರು. ಸ್ವರ್ಣಶ್ರೀ ಚಿತ್ರ ಸಂಪುಟವನ್ನು ಸಚಿವ ಮಂಕಾಳು ವೈದ್ಯ ಬಿಡುಗಡೆಗೊಳಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಸರಣಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಶಾಸಕ ಭೀಮಣ್ಣ ನಾಯ್ಕ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಉಪಸ್ಥಿತರಿದ್ದರು.

Next Article