ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿಶಿಷ್ಟ ಮ್ಯಾನರಿಸಂ ಎಂಬುದು ಸವಾಲೇ..?

02:45 AM Feb 06, 2024 IST | Samyukta Karnataka

ಕೆಲವು ಸಂಗೀತಗಾರರು, ಚಿತ್ರ ಕಲಾವಿದರು, ರಾಜಕಾರಣಿಗಳು ಅಥವಾ ಚಲನಚಿತ್ರ ಕಲಾವಿದರೇ ಆಗಿರಬಹುದು ಅವರೆಲ್ಲರೂ ಒಂದು ತೆರೆನಾದ ವಿಶಿಷ್ಟ ಎನ್ನುವಂತಹ ಮ್ಯಾನರಿಸಂ ರೂಢಿಸಿಕೊಂಡಿರುತ್ತಾರೆ. ಆ ಮ್ಯಾನರಿಸಂ ಉದ್ದವಾದ ತಲೆಗೂದಲನ್ನು ಹಾರಿಸುವುದೇ ಆಗಿರಬಹುದು ಅಥವಾ ಮೈ ತುಂಬಾ ಬಂಗಾರದ ಆಭರಣಗಳನ್ನು ಹೇರಿಕೊಂಡಿರಬಹುದು ಅಥವಾ ವಿಭಿನ್ನ ಎನ್ನಿಸುವಂತಹ ಬಟ್ಟೆಗಳನ್ನು ಧರಿಸುವುದೇ ಆಗಿರಬಹುದು. ಹೀಗೆ ಪಟ್ಟಿಯು ಬೆಳೆಯುತ್ತದೆ. ವಿಶಿಷ್ಟ/ ವಿಭಿನ್ನ ಎನ್ನುವಂತಹ ಮ್ಯಾನರಿಸಂನ ಅವಶ್ಯಕತೆ ಏನಿರಬಹುದು ಎನ್ನುವುದರ ವಿಶ್ಲೇಷಣೆಯೇ ಈ ಬರಹ.
ಒಂದು ವಿಷಯವನ್ನು ಗಮನಿಸಿ ಈ ತೆರೆನಾದ ವಿಶಿಷ್ಟ ಮ್ಯಾನರಿಸಂ ಅಳವಡಿಸಿಕೊಂಡಿರುವವರೆಲ್ಲರೂ ಖ್ಯಾತನಾಮರೆ. ಅದರಲ್ಲಿ ಎರಡನೆಯ ಮಾತೇ ಇಲ್ಲ! ಹಾಗಿದ್ದರೆ ಈ ತೆರೆನಾದ ವಿಭಿನ್ನ/ ವಿಶಿಷ್ಟ ಎನ್ನುವಂತಹ ಮ್ಯಾನರಿಸಂ ಬೇಕಿತ್ತಾ? ಈ ಪ್ರಶ್ನೆಗೆ ಉತ್ತರವು ಹೌದು ಮತ್ತು ಇಲ್ಲ ಎನ್ನುವುದೇ ಆಗಿರುತ್ತದೆ. ಯಾರೇ ಆಗಲಿ ಮತ್ತು ಯಾವ ಕ್ಷೇತ್ರವೇ ಇರಲಿ ಯಶಸ್ಸಿನ ತುತ್ತ ತುದಿಯನ್ನು ತಲುಪುವುದು ಸುಲಭ ಆದರೆ ಆ ತುದಿಯಲ್ಲಿಯೇ ಒಂದು ದೀರ್ಘಾವಧಿಯವರೆಗೂ ಉಳಿಯುವುದು ಒಂದು ದೊಡ್ಡ ಸವಾಲು! ಈ ಸವಾಲೇ ಆ ಮ್ಯಾನರಿಸಂಗಳನ್ನು ರೂಢಿಸಿಕೊಳ್ಳಲು ಪ್ರೇರಣಾ ಬಿಂದು ಆಗಿರಬಹುದು.
ಒಬ್ಬ ಚಲನಚಿತ್ರ ಕಲಾವಿದನ ಉದಾಹರಣೆಯನ್ನು ತೆಗೆದುಕೊಂಡು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಈಗಾಗಲೆ ಸಾಕಷ್ಟು ಹೋರಾಟ ಮಾಡಿ ಒಂದು ಹಂತವನ್ನು ತಲುಪಿರುವ ಆ ಕಲಾವಿದ ಯಶಸ್ಸಿನ ಏಣಿಯನ್ನು ಏರುವಾಗ ತಲೆಗೂದಲನ್ನು ಬೆಳೆಸಿಕೊಳ್ಳಲು ಶುರುಮಾಡಿದ ಎಂದಿಟ್ಟುಕೊಳ್ಳಿ. ಮುಂದೆ ಯಶಸ್ಸಿನ ತುದಿಯನ್ನು ತಲುಪಿದ ಮೇಲೆ ಆ ತಲೆಗೂದಲು 'ಐಡೆಂಟಿಟಿʼಯಾಗಿ ಬದಲಾಗಿರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಈ 'ಐಡೆಂಟಿಟಿಯೇʼ ಯಶಸ್ಸಿನ ಮುಂದಿನ ಪ್ರಯಾಣಕ್ಕೆ ದಾರಿಯಾಗುತ್ತದೆ. ಹೇಗೆ ಎಂದರೆ ಈಗಾಗಲೆ 'ಉದ್ದ ಕೂದಲಿನ ಕಲಾವಿದʼ ಎನ್ನುವ ಒಂದು ಅನೌಪಚಾರಿಕವಾಗಿ ಹೆಸರು ಬಿದ್ದಾಗಿದೆ ಮತ್ತು ಅದು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದೆ.
ಈಗ ಆ ನಟ ಓಡುವ ಕುದುರೆ ಆಗಲು, ಒಂದು ತನ್ನ ಸ್ವಂತದ್ದೆಂದು ಕರೆಯುವ ದಕ್ಕಿಸಿಕೊಂಡ ಹೆಸರು (ಉತ್ತಮ ನಟ ಎನ್ನುವುದು) ಮತ್ತೊಂದು ಮ್ಯಾನರಿಸಂನಿಂದ ಬೆಳೆದ ಹೆಸರು. ಈ ಎರಡು ಹೆಸರುಗಳು ಯಶಸ್ಸಿನ ಪ್ರಯಾಣಕ್ಕೆ 'ವೇಗವರ್ಧಕʼಗಳಾಗಿ ಕೆಲಸ ಮಾಡುತ್ತವೆ.

Next Article