For the best experience, open
https://m.samyuktakarnataka.in
on your mobile browser.

ವಿಶ್ವಗುರುಗಳ ಪ್ರತಾಪ ವಿಶ್ವಮಟ್ಟದಲ್ಲಿ 'ಪ್ರಜ್ವಲಿ'ಸಲಿ

03:35 PM Apr 30, 2024 IST | Samyukta Karnataka
ವಿಶ್ವಗುರುಗಳ ಪ್ರತಾಪ ವಿಶ್ವಮಟ್ಟದಲ್ಲಿ  ಪ್ರಜ್ವಲಿ ಸಲಿ

ಬೆಂಗಳೂರು: ವಿಶ್ವಗುರುಗಳ ಪ್ರತಾಪ ವಿಶ್ವಮಟ್ಟದಲ್ಲಿ 'ಪ್ರಜ್ವಲಿ'ಸಲಿ ಎಂದು ಸಚಿವ ದಿನೇಶ ಗುಂಡೂರಾವ್ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಕುರಿತಂತೆ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕ್ರಮ ಯಾಕೆ ತೆಗೆದುಕೊಂಡಿಲ್ಲ ಎಂದು ಅಮಿತ್‌ ಶಾ ನಮ್ಮ ಸರ್ಕಾರವನ್ನು ಕೇಳಿದ್ದಾರೆ‌. ಅಮಿತ್ ಶಾ ಅವರೆ, ಮಾಹಿತಿ ಗೊತ್ತಿಲ್ಲದಿದ್ದರೆ ಮಾತಾಡಲು ಹೋಗಬೇಡಿ.
ಅದು ಅಪಸವ್ಯವಾಗುತ್ತದೆ. ಪ್ರಜ್ವಲ್ ರೇವಣ್ಣರ ಕರ್ಮಕಾಂಡ ತಿಳಿದ ತಕ್ಷಣವೇ ನಮ್ಮ ಸರ್ಕಾರ ತನಿಖೆಗೆ SIT ರಚಿಸಿದೆ. SIT ಈಗಾಗಲೇ ತನಿಖೆಯನ್ನೂ ಆರಂಭಿಸಿದೆ. SIT ತನಿಖೆಯಲ್ಲಿ ಯಾರು ತಪ್ಪಿತಸ್ಥರು ಎಂದು ತಿಳಿಯಯವುದೋ ಅವರ ವಿರುದ್ಧ ಖಂಡಿತವಾಗಿಯೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಅದರ ಬಗ್ಗೆ ನಿಮಗೆ ಚಿಂತೆ ಬೇಡ. ಆದರೆ ಪ್ರಜ್ವಲ್ ರೇವಣ್ಣರ ಕಿರಾತಕ ಕೃತ್ಯ ನಿಮಗೆ ಮೊದಲೇ ತಿಳಿದಿತ್ತು. ಹೀಗಿದ್ದರೂ ಆತನನ್ನು NDA ಅಭ್ಯರ್ಥಿ ಮಾಡಿ ಚುನಾವಣೆಗೆ ನಿಲ್ಲಿಸಿದ್ದೀರಲ್ಲಾ..ನೀವು ಎಂತವರಿರಬಹುದು?
ನಿಮ್ಮ ವಿಶ್ವಗುರುವಿಗೆ ರಷ್ಯಾ-ಉಕ್ರೇನ್ ಯುದ್ದ ನಿಲ್ಲಿಸುವ ತಾಕತ್ತಿದೆ. ಇಸ್ರೇಲ್- ಪ್ಯಾಲೆಸ್ಟೈನ್ ನಡುವೆ ಕದನ ವಿರಾಮ ಮಾಡಿಸುವಷ್ಟು ಧಮ್ ಇದೆ ಎಂಬ ಸುದ್ದಿ ಅಂಧಭಕ್ತರ ವಲಯದಲ್ಲಿ ಹರಿದಾಡುತ್ತಿತ್ತು. ಇಷ್ಟು ಪ್ರಭಾವವಿರುವ ವಿಶ್ವಗುರುವಿಗೆ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣರನ್ನು ಹಿಡಿಸಿ ತರಲು ಸಾಧ್ಯವಿಲ್ಲವೆ.? ಮಂಗಳಸೂತ್ರದ ಬಗ್ಗೆ ಕಣ್ಣೀರು ಹಾಕುವ ವಿಶ್ವಗುರುಗಳು ಇನ್ನೂ ಏಕೆ ಸುಮ್ಮನಿದ್ದಾರೆ. ಹೆಣ್ಣುಮಕ್ಕಳ ಮಂಗಳಸೂತ್ರ ಕಸಿದ ಪ್ರಜ್ವಲ್ ರೇವಣ್ಣ ಮೇಲೆ ಮಮಕಾರ ಯಾಕೆ.? ಹಿಡಿಸಿ ತರಿಸಲು ಹೇಳಿ. ಈ ಮೂಲಕವಾದರೂ ವಿಶ್ವಗುರುಗಳ ಪ್ರತಾಪ ವಿಶ್ವಮಟ್ಟದಲ್ಲಿ 'ಪ್ರಜ್ವಲಿ'ಸಲಿ ಎಂದಿದ್ದಾರೆ