For the best experience, open
https://m.samyuktakarnataka.in
on your mobile browser.

ವೃಕ್ಷಥಾನ್ ಹೆರಿಟೇಜ್ ರನ್- 2024 ಪರಿಸರ ಚೇತನಕ್ಕೆ ತರಲಿ ಹೊಸ ತೇಜಸ್ಸು

05:33 PM Dec 22, 2024 IST | Samyukta Karnataka
ವೃಕ್ಷಥಾನ್ ಹೆರಿಟೇಜ್ ರನ್  2024 ಪರಿಸರ ಚೇತನಕ್ಕೆ ತರಲಿ ಹೊಸ ತೇಜಸ್ಸು

ವೃಕ್ಷಥಾನ್ ಹೆರಿಟೇಜ್ ಓಟವು ಪರಿಸರದ ಜಾಗೃತಿ ಮೂಡಿಸಿ ಇನ್ನಷ್ಟು ಕೋಟಿ ವೃಕ್ಷಗಳಿಗೆ ನೆಲೆ ನೀಡುವ ಪ್ರಯತ್ನವಾಗಲಿ

ವಿಜಯಪುರ: ನಡೆದಾಡುವ ದೇವರು ಪೂಜ್ಯ ಶ್ರೀ ಸಿದ್ದೇಶ್ವರ ಸ್ಮರಣಾರ್ಥ ವಿಜಯಪುರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ #ವೃಕ್ಷಥಾನ್ಹೆರಿಟೇಜ್ರನ್2024 ಯಶಸ್ವಿಯಾಗಿದೆ ಎಂದು ಸಚಿವ ಎಂ. ಬಿ. ಪಾಟೀಲ್‌ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು 21 ಕಿಲೋಮೀಟರ್, 10k ಹಾಗೂ 5k, ಸೇರಿದಂತೆ ವಿವಿಧ ಓಟಗಳಲ್ಲಿ 10ಸಾವಿರಕ್ಕೂ ಹೆಚ್ಚಿನ ಓಟಗಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು. 60ಕ್ಕೂ ಹೆಚ್ಚು ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ವೇದಿಕೆ ಕಾಯಕ್ರಮದಲ್ಲಿ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, MLC ಸುನೀಲ ಗೌಡ ಪಾಟೀಲ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ನಗರದ ಹಿರಿಯರು, ಗಣ್ಯರು ಈ ವಿಶೇಷ ಕ್ಷಣಗಳಿಗೆ ಸಾಕ್ಷಿಗಳಾದರು. ವಿಜಯಪುರದ ಜನತೆ ಕ್ರೀಡಾಪಟುಗಳಿಗೆ, ಕ್ರೀಡಾ ಅಭಿಮಾನಿಗಳಿಗೆ ಆತಿಥ್ಯ ಸತ್ಕಾರ ನೀಡಿ, ಧನ್ಯತೆ ಮೆರೆದರು. ಸಮಸ್ತರೂ ಒಳಗೊಳ್ಳುವ ಇಂತಹ ಓಟದ ಮೇಳಗಳು ಜನರಲ್ಲಿ ಒಗ್ಗಟ್ಟು ಮತ್ತು ಕ್ರೀಡಾ ಉತ್ಸಾಹವನ್ನು ಬೆಳೆಸುವುದರ ಜೊತೆಗೆ ಸೂಫಿ ಸಂತರ ನೆಲದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುತ್ತವೆ. #ಕೋಟಿವೃಕ್ಷಅಭಿಯಾನವನ್ನು ಯಶಸ್ವಿಯಾಗಿಸಿದ ವಿಜಯಪುರ ಜಿಲ್ಲೆಯಲ್ಲಿ, ಇಂದಿನ ವೃಕ್ಷಥಾನ್ ಹೆರಿಟೇಜ್ ಓಟವು ಪರಿಸರದ ಜಾಗೃತಿ ಮೂಡಿಸಿ ಇನ್ನಷ್ಟು ಕೋಟಿ ವೃಕ್ಷಗಳಿಗೆ ನೆಲೆ ನೀಡುವ ಪ್ರಯತ್ನವಾಗಲಿ. ಬಸವನಾಡು ಹಚ್ಚಹಸಿರಾಗಬೇಕು ಎಂಬ ನಮ್ಮೆಲ್ಲರ ಸಂಕಲ್ಪ ಸಾಕಾರವಾಗಲಿ ಎಂದಿದ್ದಾರೆ.

Tags :