For the best experience, open
https://m.samyuktakarnataka.in
on your mobile browser.

ವೈದ್ಯಕೀಯ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ

02:49 PM Apr 06, 2024 IST | Samyukta Karnataka
ವೈದ್ಯಕೀಯ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ

ಬೆಂಗಳೂರು: ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್​ನಲ್ಲಿರುವ ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಪ್ರಕರಣದಲ್ಲಿ, ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ಪಾಸಿಟಿವ್‌ ಇರುವುದು ಪತ್ತೆಯಾಗಿದೆ.
ನಿನ್ನೆ ವಿಕ್ಟೋರಿಯಾ ಆಸ್ಪತ್ರೆಗೆ 47 ವೈದ್ಯಕೀಯ ವಿದ್ಯಾರ್ಥಿಗಳು ದಾಖಲಾಗಿದ್ದರು. ಅದರಲ್ಲಿ 26 ವರ್ಷದ ಸಂಶೋಧನ ವಿದ್ಯಾರ್ಥಿನಿಗೆ ಬ್ಲಡ್ ಟೆಸ್ಟ್ ನಲ್ಲಿ ಕಾಲರಾ ಇರೋದು ದೃಢವಾಗಿದೆ. ಸದ್ಯ ಬ್ಲಡ್ ಟೆಸ್ಟ್ ವರದಿ ಬಂದಿದ್ದು, ಕಲ್ಚರ್ ರಿಪೋರ್ಟ್ ಗೆ ವೈದ್ಯರು ಕಾಯ್ತಿದ್ದಾರೆ. ಇನ್ನು ಎರಡ್ಮೂರು ದಿನದಲ್ಲಿ ಕಲ್ಚರ್ ರಿಪೋರ್ಟ್ ಬರುವ ಸಾಧ್ಯತೆ ಇದೆ ಎಂದಿದ್ದಾರೆ.

ಹಾಸ್ಟೆಲ್‌ ಕಿಚನ್‌ ಸೀಜ್: ಹಾಸ್ಟೆಲ್‌ನಲ್ಲಿ ಒಟ್ಟು 200 ವಿದ್ಯಾರ್ಥಿಗಳು ಇದ್ದಾರೆ. ನೀರಿನಿಂದ ಆಗಿದ್ದರೆ ಎಲ್ಲ ವಿದ್ಯಾರ್ಥಿಗಳಿಗೆ ಸೋಂಕು ತಗುಲಬೇಕಿತ್ತು. ಆದರೆ, ಕೇವಲ 47 ವಿದ್ಯಾರ್ಥಿಗಳಿಗೆ ಮಾತ್ರ ಹೀಗಾಗಿದೆ. ಆಹಾರದಿಂದ ಹೀಗಾಗಿರಬಹುದು. ಹೀಗಾಗಿ ಹಾಸ್ಟೆಲ್ ಅಡುಗೆ ಮನೆ ಸೀಲ್ ಮಾಡಲಾಗಿದೆ. ಇಬ್ಬರು ವಿದ್ಯಾರ್ಥಿಗಳು ಮಾತ್ರ ಐಸಿಯುನಲ್ಲಿ ಇದ್ದಾರೆ. ಅವರ ಆರೋಗ್ಯ ಕೂಡ ಸ್ಥಿರವಾಗಿದೆ. 47 ವಿದ್ಯಾರ್ಥಿಗಳಿಗೆ ಲೂಸ್ ಮೋಷನ್, ವಾಮಿಟಿಂಗ್ ಇತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ‌ ಕೊಡಲಾಗುತ್ತಿದೆ” ಎಂದು ವೈದ್ಯಾದಿಕಾರಿಗಳು ತಿಳಿಸಿದ್ದಾರೆ.