ವೈಮನಸ್ಸೂ ಇಲ್ಲ…. ಆತ್ಮೀಯ ಸಂಬಂಧವೂ ಇಲ್ಲ…..
ಹುಬ್ಬಳ್ಳಿ: `ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನನಗೆ ವೈಮನಸ್ಸು ಏನೂ ಇಲ್ಲ. ಹಾಗೆಯೇ ತೀರಾ ಆತ್ಮೀಯ ಸಂಬಂಧವೂ ಏನಿಲ್ಲ. ಅವರು ೨೦೦೬ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದವರು. ಪಕ್ಷದ ವಿಚಾರ ಬಂದಾಗ ಅವರೊಂದಿಗೆ ಮಾತನಾಡಿದ್ದೇನೆ. ನಾವು ಯಾವ ಉದ್ದೇಶ ಇಟ್ಟುಕೊಂಡು ಅಧಿಕಾರಕ್ಕೆ ಬಂದಿದ್ದೆವೆಯೊ ಅದನ್ನು ಈಡೇರಿಸಬೇಕು. ಅದು ಆಗುತ್ತಿಲ್ಲ ಎಂದಾಗ ನಾನು ಪ್ರಶ್ನೆ ಮಾಡಿದ್ದೇನೆ ಅಷ್ಟೇ'
ಇದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ರವಿವಾರ ನಗರದಲ್ಲಿ ಮಾಧ್ಯಮದವರಿಗೆ ನೀಡಿದ ಹೇಳಿಕೆ ಇದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ವಿರುದ್ಧ, ಕಾರ್ಯಶೈಲಿ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿಕೊಂಡು ಬಂದಿರುವ ಹರಿಪ್ರಸಾದ್ ಅವರು, ನಾನು ಅಧಿಕಾರದ ಹಿಂದೆ ಹೋದವನಲ್ಲ. ಅಲ್ಲದೇ ರಾಜಕೀಯ ಕುತಂತ್ರಕ್ಕೆ ಬಗ್ಗುವವನ್ನಲ್ಲ ಎಂದು ಹೇಳಿದರು.
ಸರಕಾರ ಅಧಿಕಾರಕ್ಕೆ ಬರುವವರೆಗೂ ನಮ್ಮ ಪಾತ್ರ. ಸರಕಾರ ನಡೆಸುವುದು ಅವರ ಪಾತ್ರ. ಸರಕಾರ ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ನೋಡುವುದು ಪಕ್ಷದ ಕೆಲಸ. ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡುತ್ತಾರೆ. ಅನುದಾನ ಕೊಡುವಾಗ ಎಲ್ಲರಿಗೂ ಕೊಡಬೇಕು ಎಂದರು.