For the best experience, open
https://m.samyuktakarnataka.in
on your mobile browser.

ವೈಯಕ್ತಿಕ ಲಾಭ ಪಡೆದಿದ್ದರೆ, ರಾಜಕೀಯ ನಿವೃತ್ತಿ

06:15 PM Nov 27, 2024 IST | Samyukta Karnataka
ವೈಯಕ್ತಿಕ ಲಾಭ ಪಡೆದಿದ್ದರೆ  ರಾಜಕೀಯ ನಿವೃತ್ತಿ

ರಾಯಚೂರು: ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರಲ್ಲಿ ನನ್ನ ಪತ್ರದ ಮೇಲೆ ವೈಯಕ್ತಿಕವಾಗಿ ಸಹಿ ಪಡೆದುಕೊಂಡು ಲಾಭ ಪಡೆದಿದ್ದರೆ, ತೋರಿಸಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಸವಾಲು ಹಾಕಿದರು.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ವಕ್ಫ್ ಆಸ್ತಿ ಕುರಿತು ಮನವಿ ಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹೋರಾಟ ಮಾಡುವ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ ಅವರೊಂದಿಗೆ ಸಹಿ ಪಡೆದುಕೊಳ್ಳುತ್ತಿರುವವರು ನಾಲಾಯಕರು, ನಾಚಿಕೇಡಿನವರು ಎಂದು ಟೀಕಿಸಿದರು.
ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಅವ್ಯವಹಾರ ವಿರೋಧಿಸಿ ಪಾದಯಾತ್ರೆ ನಡೆಸಲು ಉದ್ದೇಶ ಹೊಂದಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು 87 ಕೋಟಿ ಅವ್ಯವಹಾರವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ವಕ್ಫ್ ಜಮೀನು ಕಬಳಿಕೆ ವಿರೋಧಿಸಿ ವಿಜಯಪುರದಲ್ಲಿ ನಡೆದ ಹೋರಾಟಕ್ಕೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪ್ರಲ್ಹಾದ್ ಜೋಶಿ ಹಾಗೂ ಸಂಸತ್ತಿನ ಜಂಟಿ ಸಮಿತಿ ಅಧ್ಯಕ್ಷರೇ ಆಗಮಿಸಿದ್ದರು. ಅಲ್ಲದೇ ಸಂಸದರು, ಶಾಸಕರು ಬಂದಿದ್ದರು. ಆದರೂ ಹೋರಾಟಕ್ಕೆ ಯಾವ ಪರವಾನಗಿ ಪಡೆಯಬೇಕಾ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡರಾದ ಅರವಿಂದ ಲಿಂಬಾವಳಿ, ರಮೇಶ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಮಾಜಿ ಸಂಸದ ಬಿ.ವಿ ನಾಯಕ ಹಾಗೂ ಮತ್ತಿತರರಿದ್ದರು.