ವೈರಲ್ ಆದ ಪೊಲೀಸ್ ಇಲಾಖೆಯ ಜಾಗೃತಿ ಸಂದೇಶ
12:09 PM Dec 18, 2024 IST | Samyukta Karnataka
ವಿಜಯಪುರ: ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯು ಅಪಘಾತ ತಪ್ಪಿಸಲು ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಸಂದೇಶವನ್ನು ನೀಡಿದ್ದಾರೆ.
ಕಬ್ಬು ಸಾಗಿಸುವ ವಾಹನಗಳಿಗೆ ರಿಪ್ಲೆಕ್ಟರ್ ಅಳವಡಿಕೆ ಕುರಿತಂತೆ ಹಾಗೂ ಮುಂದೆ ಆಗುವಂತ ರಸ್ತೆ ಅಪಘಾತಗಳನ್ನು ಹಾಗೂ ಅನಾಹುತಗಳನ್ನು ತಪ್ಪಿಸಲಿಕ್ಕೆ ಟ್ರ್ಯಾಕ್ಟರ್ ಡ್ರೈವರಗಳು, ಮಾಲೀಕರು ಮತ್ತು ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಸಂದೇಶವನ್ನು ಸಾರುವ ವಿಡಿಯೋ ತುಣಕೊಂದನ್ನು ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.