For the best experience, open
https://m.samyuktakarnataka.in
on your mobile browser.

ಶಂಕರಾಚಾರ್ಯರ ಅವಹೇಳನ: ಬ್ರಾಹ್ಮಣ ಮಹಾಸಭೆ ಖಂಡನೆ

04:54 PM Dec 08, 2024 IST | Samyukta Karnataka
ಶಂಕರಾಚಾರ್ಯರ ಅವಹೇಳನ  ಬ್ರಾಹ್ಮಣ ಮಹಾಸಭೆ ಖಂಡನೆ

ಗದಗ(ನರೇಗಲ್ಲ): ಹಿಂದೂ ಧರ್ಮ ಪುನರುತ್ಥಾನಕ್ಕೆ ಶ್ರಮಿಸಿದ ಆದಿ ಜಗದ್ಗುರು ಶಂಕರಾಚಾರ್ಯರು ಬಗ್ಗೆ ಕೆಲವರು ಅವಹೇಳನಕಾರಿಯಾಗಿ ಮಾಡನಾಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಪಟ್ಟಣದ ಶ್ರೀದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯು ೫೦ನೇ ವರ್ಷದ ಕಾರ್ಯಕ್ರಮ ನಿಮಿತ್ತ ಎಲ್ಲ ವಿಪ್ರ ಬಾಂಧವರನ್ನು ಆಮಂತ್ರಿಸಿ ಮಾತನಾಡಿದ ಅವರು, ಸನಾತನ ಧರ್ಮದ ಸಂಸ್ಥಾಪಕ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಅವಹೇಳನ ವರದಿಯನ್ನು ಪತ್ರಿಕೆಯೊಂದರಲ್ಲಿ ಓದಿದ್ದೇನೆ. ಶಂಕರಾಚಾರ್ಯರು ಜಗತ್ತಿನಲ್ಲಿ ಅಳಿದು ಹೋಗುತ್ತಿದ್ದ ಹಿಂದೂ ಧರ್ಮ ಕಟ್ಟಿ ನಿಲ್ಲಿಸಿದ ಮಹನೀಯರು. ಅಂತಹವರ ವಿರುದ್ಧವಾಗಿ ಅವಹೇಳನ ಹೇಳಿಕೆ ಕೊಡುವವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಬಲವಾಗಿ ಖಂಡಿಸುತ್ತದೆ. ಬ್ರಾಹ್ಮಣ ಸಮಾಜದ ಆಚಾರ್ಯತ್ರಯರು ಸಮಾಜಕ್ಕೆ ವಿಶಿಷ್ಟವಾದ ಕೊಡುಗೆ ನೀಡಿದ್ದಾರೆ. ಇಂತಹ ವ್ಯಕ್ತಿಗಳಾಗಲಿ, ಇನ್ನೊಂದು ಧರ್ಮದವರು ಅವಹೇಳನ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.