For the best experience, open
https://m.samyuktakarnataka.in
on your mobile browser.

ಶರಾವತಿ ಸಂತ್ರಸ್ತರ ಸಮಸ್ಯೆ : ಸಮಸ್ಯೆಯಾಗಿ ಉಳಿದುಕೊಂಡಿದೆ

11:24 AM Dec 12, 2024 IST | Samyukta Karnataka
ಶರಾವತಿ ಸಂತ್ರಸ್ತರ ಸಮಸ್ಯೆ   ಸಮಸ್ಯೆಯಾಗಿ ಉಳಿದುಕೊಂಡಿದೆ

ಸರ್ಕಾರಗಳು ಸೂಕ್ತ ಸಮಯದಲ್ಲಿ ಐತಿಹಾಸಿಕ ನಿರ್ಧಾರಕ್ಕೆ ತನ್ನ ನಿರ್ದಿಷ್ಟ ಇಚ್ಛಾಶಕ್ತಿ ತೋರದೆ ಕಳೆದ 60 ವರ್ಷಕ್ಕೂ ಅಧಿಕ ಸಮಯದಿಂದ ಈ ಗಂಭೀರ ಸಮಸ್ಯೆ ಸಮಸ್ಯೆಯಾಗಿ ಉಳಿದುಕೊಂಡಿದೆ.

ನವದೆಹಲಿ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಬಿ.ವೈ.ರಾಘವೇಂದ್ರ ಅವರು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರದ ಕ್ರಮಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ, ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ನಾಡಿನಲ್ಲಿ ಎದುರಾಗಿದ್ದ ವಿದ್ಯುತ್ ಬವಣೆಯನ್ನು ನೀಗಿಸಲು ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತನ್ನು ಉಪಯೋಗಿಸಿಕೊಂಡು ಶರಾವತಿ ಜಲವಿದ್ಯುತ್ ಯೋಜನೆಯನ್ನು 1960 ರ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಯಿತು.

ಈ ಒಂದು ಐತಿಹಾಸಿಕ ಯೋಜನೆಯಿಂದ ಜಲಾಶಯದ ಹಿನ್ನೀರಿನಲ್ಲಿ ವಾಸವಿದ್ದ ಸಾವಿರಾರು ಕುಟುಂಬಗಳು ತಮಗೆ ಆಧಾರವಾಗಿದ್ದ ಸಾವಿರಾರು ಎಕರೆ ಭೂಮಿ ಮುಳುಗಡೆ ಆಗುತ್ತದೆ ಎಂಬ ಕಲ್ಪನೆ ಇದ್ದರೂ ಜಲಾಶಯ ನಿರ್ಮಾಣಕ್ಕೆ ತಮ್ಮ ಸೂಕ್ತ ಸಹಕಾರ ನೀಡಿದ ಪರಿಣಾಮ ಇಂದು ರಾಜ್ಯದ ಬಹುಪಾಲು ವಿದ್ಯುತ್ ಈ ಕೇಂದ್ರದಿಂದ ಉತ್ಪಾದನೆ ಆಗುತ್ತಿದೆ.

ಆದರೆ ನಂತರ ಆಳಿದ ಸರ್ಕಾರಗಳು ಸೂಕ್ತ ಸಮಯದಲ್ಲಿ ಐತಿಹಾಸಿಕ ನಿರ್ಧಾರಕ್ಕೆ ತನ್ನ ನಿರ್ದಿಷ್ಟ ಇಚ್ಛಾಶಕ್ತಿ ತೋರದೆ ಕಳೆದ 60 ವರ್ಷಕ್ಕೂ ಅಧಿಕ ಸಮಯದಿಂದ ಈ ಗಂಭೀರ ಸಮಸ್ಯೆ ಸಮಸ್ಯೆಯಾಗಿ ಉಳಿದುಕೊಂಡಿದೆ. ಇಲ್ಲಿಯವರೆಗೂ ಎದುರಾದ ತಾಂತ್ರಿಕ ಮತ್ತು ತಾಂತ್ರಿಕೇತರ ಹಾಗೂ ಇನ್ನಿತರ ಆಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಕೆಳ ಹಂತದ ನ್ಯಾಯಾಲಯದಿಂದ ಹಿಡಿದು ಉಚ್ಚ ನ್ಯಾಯಾಲಯ ದಾಟಿಕೊಂಡು ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಕೊನೆಯ ಹಂತದ ನ್ಯಾಯಕ್ಕಾಗಿ ಹೋರಾಟ ಪ್ರಾರಂಭಿಸಿದೆ.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ಸಮಯದಿಂದ ತನ್ನ ನಿರ್ಣಯಗಳಲ್ಲಿ ಸದಾ ಜನ ಹಿತ ಹಾಗೂ ಜನ ಪರ ಎಂಬುದು ದೃಡಿ ಕರಿಸಿದೆ. ಈಗ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ಹೋರಾಟ ಆರಂಭಿಸಿದೆ.

ಈ ಮಹತ್ತರವಾದ ಸಮಯದಲ್ಲಿ ಕೇಂದ್ರ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಕೇಂದ್ರ ಸಚಿವರು ಮಲೆನಾಡಿನ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಸೂಕ್ತ ರೀತಿಯಲ್ಲಿ ಹೋರಾಟ ನಡೆಸಿ ಹೊಸ ಮೈಲಿಗಲ್ಲು ಸ್ಥಾಪಿಸುವ ಮಹಾದಾಸೆ ಹಾಗೂ ಭರವಸೆ ನಮಗೆಲ್ಲ ಮೂಡಿದೆ.

ಈ ಕುರಿತು ಸದನದ ಗಮನ ಸೆಳೆದು ಶರಾವತಿ ಹಿನ್ನೀರಿನ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ತೆರೆದಿಟ್ಟು ಪುನರ್ವಸತಿ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ದಿಟ್ಟ ಕ್ರಮ ತೆಗೆದುಕೊಳ್ಳುವಂತೆ ಮತ್ತೊಮ್ಮೆ ಆಗ್ರಹ ಪೂರ್ವಕವಾಗಿ ಮನವಿ ಮಾಡಲಾಯಿತು ಎಂದಿದ್ದಾರೆ.

Tags :