ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಶಾಲಾ-ಕಾಲೇಜು ಕಟ್ಟಡ ದುರಸ್ತಿಗೆ ಆದ್ಯತೆ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ

02:15 AM Feb 17, 2024 IST | Samyukta Karnataka

ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶಾಲಾ-ಕಾಲೇಜುಗಳ ಕೊಠಡಿ-ಶೌಚಾಲಯ ನಿರ್ಮಾಣ ಹಾಗೂ ದುರಸ್ತಿಗೆ ಸರ್ಕಾರ ೮೫೦ ಕೋಟಿ ರೂ. ವ್ಯಯಿಸಲಿದೆ.
ಶಿಕ್ಷಣ ಇಲಾಖೆಗೆ ಈ ಬಾರಿ ಅತಿಹೆಚ್ಚು ೪೪, ೪೨೨ ಕೋಟಿ ರೂ. ಮೀಸಲಿಟ್ಟಿರುವ ಸರ್ಕಾರ ಆಯ್ದ ಶಾಲೆಗಳನ್ನು ಸಿ.ಎಸ್.ಆರ್ ಅನುದಾನದಡಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಿದೆ.
೩ರಿಂದ ೫ನೇ ತರಗತಿಯ ವಿದ್ಯಾಥಿಗಳ ಗಣಿತ ಕಲಿಕೆಗೆ ಗಣಿಕ-ಗಣಕ, ೬-೭ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಮರುಸಿಂಚನ ಕಾರ್ಯಕ್ರಮ ಜಾರಿ, ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್‌ಗಾಗಿ ೫೦ ಕೋಟಿ ರೂ. ಮೀಸಲು, ೨೦೦೦ ಸರ್ಕಾರಿ ಶಾಲೆಗಳಲ್ಲಿ ಕನ್ನಡ-ಇಂಗ್ಲೀಷ್ ಮಾಧ್ಯಮದಲ್ಲಿ ಬೋಧನೆ, ಶಿಕ್ಷಣ ಸಂಸ್ಥೆಗಳನ್ನು ಸಹಬಾಳ್ವೆಯ ವಿದ್ಯಾಕೇಂದ್ರಗಳಾಗಿ ರೂಪಿಸಲು `ನಾವು-ಮನುಜರು' ಹೆಸರಿನಡಿ ವಾರಕ್ಕೆರಡು ಗಂಟೆ ವಿಶೇಷ ತರಗತಿ, ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಪ್ರೌಢಶಾಲೆ-ಪದವಿ ಪೂರ್ವ ಕಾಲೇಜುಗಳ ಪ್ರಾರಂಭಕ್ಕೆ ಮುಂದಡಿಯಿಟ್ಟಿದೆ. ರಾಜ್ಯದಲ್ಲಿನ ೭೪ ಆದರ್ಶ ವಿದ್ಯಾಲಯಗಳನ್ನು ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಿರುವ ಸರ್ಕಾರ, ಆಯ್ದ ೧೦೦ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ೧೦ ಕೋಟಿ ರೂ. ವೆಚ್ಚದಲ್ಲಿ ಗಣಕ ವಿಜ್ಞಾನ ಸಂಯೋಜನೆಯನ್ನು ಪ್ರಾರಂಭಿಸಲಿದೆ. ವಿಜ್ಞಾನ ವಿಷಯಗಳಲ್ಲಿ ೪೦೦ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ವಿಜ್ಞಾನ ಪ್ರಯೋಗಾಲಯಗಳನ್ನು ಉನ್ನತೀಕರಿಸಲು ತಲಾ ೧೦ ಲಕ್ಷ ರೂ. ನಂತೆ ಅನುದಾನ, ೨೦ ಸಾವಿರ ವಿದ್ಯಾರ್ಥಿಗಳಿಗೆ ನೀಟ್/ಜೆಇಇ/ಸಿಇಟಿ ತರಬೇತಿಗಾಗಿ ೧೦ ಕೋಟಿ ರೂ. ನೆರವು.
೪೬,೮೨೯ ಸರ್ಕಾರಿ ಶಾಲೆ-೧,೨೩೪ ಕಾಲೇಜಿಗೆ ಉಚಿತ ವಿದ್ಯುತ್-ನೀರಿನ ಸೌಲಭ್ಯಕ್ಕೆ ೨೫ ಕೋಟಿ ರೂ. ವ್ಯಯಿಸುವುದಾಗಿ ತಿಳಿಸಿರುವ ಸರ್ಕಾರ, ಶಿಕ್ಷಕರು-ಉಪನ್ಯಾಸಕರ ನೇಮಕ ಪ್ರಕ್ರಿಯೆ ಆರಂಭಿಸುವ ಭರವಸೆಯಿತ್ತಿದೆ.

Next Article