ಶಾಲೆಗಳಲ್ಲಿ ನಕಲಿ ಜಾತ್ಯತೀತವಾದದ ಪ್ರಯೋಗ
ಬೆಂಗಳೂರು: ಶಾಲೆಗಳ ಪ್ರವೇಶದ್ವಾರದಲ್ಲಿ 'ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ' ಎಂದು ಬದಲಾವಣೆ ಮಾಡಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಪ್ರಶ್ನಾರ್ಹ ಎಂದು ಶಾಸಕ ಬಸನಗೌಡ ಪಾಟೀಲ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು "ಶಾಲೆಗಳ ಪ್ರವೇಶದ್ವಾರದಲ್ಲಿದ್ದ 'ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ' ಎಂಬ ವಾಕ್ಯವನ್ನು 'ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ' ಎಂದು ಬದಲಾವಣೆ ಮಾಡಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಪ್ರಶ್ನಾರ್ಹ.
'ಕೈ ಮುಗಿಯುವುದು' ನಮ್ಮ ಸಂಸ್ಕೃತಿಯಲ್ಲವೇ ? ನಮಿಸುವುದು ನಮ್ಮ ಧರ್ಮವಲ್ಲವೇ ? ಯಾರನ್ನು ಓಲೈಸಲು ಈ ಬದಲಾವಣೆಗಳು? ಕಾಲೇಜುಗಳಲ್ಲಿ ಸರಸ್ವತಿ ಪೂಜೆ ಮಾಡಲು ಅಡ್ಡಿಪಡಿಸಿದ್ದಾಯ್ತು, ದೀಪಾವಳಿಯಂದು ಪಟಾಕಿ ಹೊಡೆಯಲು ಪೊಲೀಸರ ಅನುಮತಿ ಬೇಕು, ಅರ್ಚರಕರಿಗೆ ಸಂಬಳ ಹಿಂದಿರುಗಿಸಲು ನೋಟೀಸು, ಮಹಾಶಿವರಾತ್ರಿಯಂದು ನೂರಾರು ವರ್ಷಗಳ ಐತಿಹ್ಯವುಳ್ಳ ದೇವಳದಲ್ಲಿ ಶಿವನಿಗೆ ಪೂಜೆ ಸಲ್ಲಿಸಲು ಆಕ್ಷೇಪಣೆ, ಈಗ ಶಾಲೆಗಳಲ್ಲಿ ನಕಲಿ ಜಾತ್ಯತೀತವಾದದ ಪ್ರಯೋಗ. ಈ ರೀತಿಯಾದ ಹಿಂದೂ ವಿರೋಧಿ ನಿಲುವುಗಳು ಈ ಸರ್ಕಾರದ ರೋಗಗ್ರಸ್ಥ ಮನಃಸ್ಥಿತಿಯ ಪರಾಕಾಷ್ಠೆ ಎಂದು ಬರೆದುಕೊಂಡಿದ್ದಾರೆ.