For the best experience, open
https://m.samyuktakarnataka.in
on your mobile browser.

ಶಿಕ್ಷಕನ ಶವ ಪತ್ತೆ: ಕೊಲೆ ಶಂಕೆ

07:42 PM Dec 12, 2024 IST | Samyukta Karnataka
ಶಿಕ್ಷಕನ ಶವ ಪತ್ತೆ  ಕೊಲೆ ಶಂಕೆ

ಮುದ್ದೇಬಿಹಾಳ: ಸಂಶಯಾಸ್ಪದವಾಗಿ ವ್ಯಕ್ತಿಯ ಮೃತದೇಹವೊಂದು ತಾಲೂಕಿನ ಚಲಮಿ ತಾಂಡಾ ಗ್ರಾಮದ ಮನೆಯೊಂದರಲ್ಲಿ ಪತ್ತೆಯಾಗಿದೆ.
ಮೃತ ದುರ್ದೈವಿಯನ್ನು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದ ಶಂಕ್ರಪ್ಪ ಬಡಿಗೇರ(57) ಎಂದು ಗುರುತಿಸಲಾಗಿದೆ. ಈತ ಹುಣಸಗಿ ತಾಲೂಕಿನ ಕುರೇಕಿನಾಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಎಂದು ತಿಳಿದುಬಂದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಅಸುನೀಗಿದ್ದಾನೆ ಎನ್ನಲಾಗಿದ್ದು, ಘಟನೆಯ ಹಿನ್ನಲೆ ನಿಘೂಡವಾಗಿದೆ. ಈ ವ್ಯಕ್ತಿ ಇಲ್ಲಿಗೆ ಯಾಕೆ ಬಂದಿದ್ದ? ಇದು ಕೊಲೆಯಾ ಅಥವಾ ಸಹಜ ಸಾವಾ ಎಂಬ ಬಗ್ಗೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ ಬೇಟಿ ನೀಡಿ ಪರಿಶೀಲಿದ್ದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.