ಶಿಕ್ಷಕಿ ಅಮಾನತು: ಶಾಲೆ ಗೇಟ್ ಗೆ ಬೀಗ ಹಾಕಿ ವಿದ್ಯಾರ್ಥಿಗಳ ಪ್ರತಿಭಟನೆ
ಕುಷ್ಟಗಿ: ಬಿಸಿಯೂಟ ಸೇವನೆ ನಂತರ ತಾಲ್ಲೂಕಿನ ಬಿಜಕಲ್ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಬಹಳಷ್ಟು ವಿದ್ಯಾರ್ಥಿಗಳು ವಾಂತಿಯಿಂದ ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿ ದಂತೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಕಾರಣಕ್ಕೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮಂಜುಳಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಶಾಲೆಯ ಗೇಟ್ ಗೆ ಬೀಗ ಹಾಕಿ ಶಾಲಾ ತರಗತಿಗಳನ್ನು ಬಹಿಷ್ಕಾರಸಿ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಅ.24 ರಂದು ಆದೇಶ ಹೊರಡಿಸಿದ್ದಾರೆ. ಅದಕ್ಕೂ ಮೊದಲು ಶಿಕ್ಷಕಿಗೆ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಶಾಲೆಯ ಮಕ್ಕಳ ಪಾಲಕರು ಸಭೆ ನಡೆಸಿ ಶಾಲೆಗೆ ಬೀಗ ಹಾಕಿ ಮಕ್ಕಳನ್ನು ತರಗತಿಯಿಂದ ಬಹಿಷ್ಕಾರಗೊಳಿಸಿ ಪ್ರತಿಭಟನೆ ಮಾಡಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅಡುಗೆ ಸಿಬ್ಬಂದಿಗಳಿಂದ ಆಗಿರುವ ತಪ್ಪನ್ನು ಮುಖ್ಯ ಶಿಕ್ಷಕಯ ತಲೆಗೆ ಕಟ್ಟಿ ಅಮಾನತು ಮಾಡಿರುವುದು ಸರಿಯಾದ ಕ್ರಮವಲ್ಲ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಅಂದಾಗ ಮಾತ್ರ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ ಇಲ್ಲ ಅಂದರೆ ಕಳಿಸುವುದಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಮಾಡುವ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯ ತಪ್ಪು ಏನು ಇಲ್ಲದಿದ್ದರೂ ಸಹ ಶಿಕ್ಷಣ ಇಲಾಖೆ ಅಧಿಕಾರಿಗಳು ನಮ್ಮ ನೆಚ್ಚಿನ ಮುಖ್ಯ ಶಿಕ್ಷಕಿ ಆಗಿರುವ ಮಂಜುಳಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವುದು ಸರಿಯಾದ ಕ್ರಮವಲ್ಲ ಹೀಗಾಗಿ ಕೂಡಲೇ ಅಮಾನತು ಆದೇಶವನ್ನು ಇನ್ ಪಡೆಯಬೇಕು ಅಂದಾಗ ಮಾತ್ರ ತರಗತಿಗಳಿಗೆ ತೆರಳುತ್ತೇವೆ ಇಲ್ಲ ಅಂದರೆ ತರಗತಿಗಳನ್ನು ಬಹಿಷ್ಕರಿಸಿ ದೂರ ಉಳಿಯುತ್ತೇವೆ ಎಂದರು.