For the best experience, open
https://m.samyuktakarnataka.in
on your mobile browser.

ಶಿಗ್ಗಾವಿ, ಸವಣೂರು ಕ್ಷೇತ್ರದ ಜನರೊಂದಿಗಿನ ಸಂಬಂಧಕ್ಕೆ ರಾಜೀನಾಮೆ ಇಲ್ಲ

05:16 PM Jul 19, 2024 IST | Samyukta Karnataka
ಶಿಗ್ಗಾವಿ  ಸವಣೂರು ಕ್ಷೇತ್ರದ ಜನರೊಂದಿಗಿನ ಸಂಬಂಧಕ್ಕೆ ರಾಜೀನಾಮೆ ಇಲ್ಲ

ಹಾವೇರಿ: ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ, ಆದರೆ, ಶಿಗ್ಗಾವಿ ಸವಣೂರು ಕ್ಷೇತ್ರದ ಜನರೊಂದಿಗಿನ ಸಂಬಂಧಕ್ಕೆ ಯಾವತ್ತೂ ರಾಜೀನಾಮೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಆರಂಭಿಸಿರುವ ಮತದಾರರಿಗೆ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಇಂದು ತವರಮೆಳಹಳ್ಳಿ, ಹೊಸ, ಹಳೆ ಹಲಸೂರ, ಮನ್ನಂಗಿ, ಮನ್ನಂಗಿ ಪ್ಲಾಟ್, ಕುರಬೂರ ಮಲ್ಲೂರ, ಕಲ್ಮಡವು, ಬರದೂರ, ಚಳ್ಳಾಳ ಹಾಗೂ ಮಾವೂರ ಜನತೆಗೆ ಧನ್ಯವಾದ ಅರ್ಪಿಸಿ ಮಾತನಾಡಿದರು.
ನಾನು ರಾಜಕಾರಣ ಮಾಡಲು ಬಂದಿಲ್ಲ, ತಮಗೆಲ್ಲರಿಗೂ ಕೃತಜ್ಞತೆ ಹಾಗೂ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ನನ್ನನ್ನು ನಾಲ್ಕು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿ ಪ್ರೀತಿ ವಿಶ್ವಾಸ ತೋರಿಸಿದ್ದೀರಿ, ಆ ಪ್ರೀತಿ ವಿಶ್ವಾಸವನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಬೇಕು. ನಾನು ಈಗ ಶಾಸಕನಲ್ಲದಿದ್ದರೂ ನಿಮ್ಮ ಕೆಲಸ ಕಾರ್ಯ ಮಾಡಲು ಶಕ್ತಿ ಇಲ್ಲ ಅಂತಲ್ಲ, ನೀವು ನನಗೆ ಶಾಸಕನನ್ನಾಗಿ ಮಾಡಿ ಸಹಕಾರ, ಜಲಸಂಪನ್ಮೂಲ, ಗೃಹ ಇಲಾಖೆ, ಕಾನೂನು ಸಂಸದೀಯ ವ್ಯವಹಾರದಂತ ಖಾತೆಗಳನ್ನು ನಿಭಾಯಿಸುವ ಶಕ್ತಿ ನೀಡಿದ್ದು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ನಿಮ್ಮ ನನ್ನ ನಡುವಿನ ಸಂಬಂಧಕ್ಕೆ ರಾಜೀನಾಮೆ ಇಲ್ಲ ಎಂದು ಹೇಳಿದರು.
ಮನುಷ್ಯನಿಗೆ ಉಪಕಾರ ಸ್ಮರಣೆ ಬಹಳ ಮುಖ್ಯ ನಾನು ನಿಮ್ಮಿಂದ ಇಷ್ಟೊಂದು ಪ್ರೀತಿ ಪಡೆದಿದ್ದೇನೆ ನಾನು ಕೃತಗ್ನನಾಗಲು ಸಿದ್ಧನಿಲ್ಲ. ನಾನು ಯಾವಾಗಲೂ ಕೃತಜ್ಞತೆಯಿಂದ ಇರುತ್ತೇನೆ ಎಂದರು.