ಶಿರಸಿಯ ಮಾನಸ ಹೆಗಡೆಗೆ ಐರ್ಲೆಂಡ್‌ನಲ್ಲಿ ಪಿಎಚ್‌ಡಿ ಪ್ರದಾನ
09:58 PM Feb 05, 2024 IST | Samyukta Karnataka
ಹುಬ್ಬಳ್ಳಿ: ಮೂಲತಃ ಶಿರಸಿ ತಾಲೂಕು ಬಬ್ಬಿಗದ್ದೆಯವರಾದ ಮಾನಸ ಎಂ. ಹೆಗಡೆ ಅವರು "ಇನ್ವೆಸ್ಟಿಗೇಟಿಂಗ್ ದಿ ಆರ್ಗೆನಿಕ್ ಇನ್‌ಆರ್ಗೆನಿಕ್ ಸೋಲ್ ಜೆಲ್ ಕೋಟಿಂಗ್ ಫಾರ್ ಮರಿನ್ ರಿನಿವೇಬಲ್ ಎನರ್ಜಿ ಅಪ್ಲಿಕೇಶನ್ಸ್" ಎಂಬ ವಿಷಯ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಐರ್ಲೆಂಡ್‌ನ ಸೌಥ್ ಈಸ್ಟ್ ಟೆಕ್ನಾಲಜಿ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಪಿಎಚ್‌ಡಿ ಗೌರವ ಸಂದರ್ಭದಲ್ಲಿ ಅಲ್ಲಿನ ತಜ್ಞರು ಅವರನ್ನು ಅಭಿನಂದಿಸಿದ್ದಾರೆ.