For the best experience, open
https://m.samyuktakarnataka.in
on your mobile browser.

ಶಿವಮೊಗ್ಗ: ಹೊಸದೊಂದು ಜಿಗಿತಕ್ಕೆ ಸಾಕ್ಷಿ

12:31 PM Nov 21, 2023 IST | Samyukta Karnataka
ಶಿವಮೊಗ್ಗ  ಹೊಸದೊಂದು ಜಿಗಿತಕ್ಕೆ ಸಾಕ್ಷಿ

ಶಿವಮೊಗ್ಗ: ಶಿವಮೊಗ್ಗದಿಂದ ಇಂದಿನಿಂದ 3 ಹೊಸ ಮಾರ್ಗಗಳಲ್ಲಿ ವಿಮಾನ ಸಂಚಾರ ಅಧಿಕೃತವಾಗಿ ಆರಂಭಗೊಂಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಗಳಲ್ಲಿ ಚಿತ್ರಗಳನ್ನ ಹಂಚಿಕೊಂಡು ಸಂಸದ ಬಿವೈ ರಾಘವೇಂದ್ರ ಪೋಸ್ಟ್‌ ಮಾಡಿದ್ದಾರೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ವಿಮಾನ ನಿಲ್ದಾಣ ಇಂದು ಹೊಸದೊಂದು ಜಿಗಿತಕ್ಕೆ ಸಾಕ್ಷಿಯಾಯಿತು!
ಇಂದಿನಿಂದ 3 ಹೊಸ ಮಾರ್ಗಗಳಲ್ಲಿ (ಶಿವಮೊಗ್ಗ-ಗೋವಾ, ಶಿವಮೊಗ್ಗ-ತಿರುಪತಿ, ಶಿವಮೊಗ್ಗ-ಹೈದ್ರಾಬಾದ್) ಸ್ಟಾರ್ ಏರ್ ಲೈನ್ಸ್ ನ ವಿಮಾನ ಸಂಚಾರ ಅಧಿಕೃತವಾಗಿ ಆರಂಭಗೊಂಡಿದೆ ಎಂದು ತಿಳಿಸಲು ಖುಷಿಯಾಗುತ್ತಿದೆ.
ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ, ಸ್ಟಾರ್ ಏರ್‌ಲೈನ್ಸ್‌ನ ಅಧಿಕಾರಿಗಳು ಈ ಸಂತಸದ ಕ್ಷಣದಲ್ಲಿ ನನ್ನೊಂದಿಗಿದ್ದರು. ಈ ವಿಮಾನ ಸೇವೆಯಿಂದ ಜಿಲ್ಲೆಯ ಸಂಪರ್ಕದ ಕೊಂಡಿ ಇನ್ನಷ್ಟು ವಿಸ್ತರಿಸಲಿದ್ದು, ನೆರೆ ರಾಜ್ಯಗಳ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ ಎಂದು ಬರೆದುಕೊಂಡಿದ್ದಾರೆ.