For the best experience, open
https://m.samyuktakarnataka.in
on your mobile browser.

ಶೃಂಗೇರಿ ಮಠಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ

05:26 PM Aug 16, 2024 IST | Samyukta Karnataka
ಶೃಂಗೇರಿ ಮಠಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ ಭೇಟಿ

ಶೃಂಗೇರಿ; ಕೇಂದ್ರ ಸರಕಾರದ ರೈಲ್ಯೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಅವರ ಪತ್ನಿ ಶೈಲಜಾ ಸೋಮಣ್ಣ ಶುಕ್ರವಾರ ಶೃಂಗೇರಿ ಶಾರದಾಪೀಠಕ್ಕೆ ಭೇಟಿ ನೀಡಿ,ಶ್ರೀ ಶಾರದಾಂಬಾ,ಶ್ರೀತೋರಣಗಣಪತಿ,ಶ್ರೀಶಂಕರಾಚಾರ್ಯ ಮುಂತಾದ ದೇವಾಲಯಗಳನ್ನು ದರ್ಶಿಸಿ ವಿಶೇಷಪೂಜೆ ಸಲ್ಲಿಸಿದರು.ಬಳಿಕ ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರುಗಳಾದ ಶ್ರೀಭಾರತೀತೀರ್ಥ ಮಹಾಸ್ವಾಮೀಜಿ ಹಾಗೂ ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದುಕೊಂಡರು.

ಸುದ್ಧಿಗಾರರ ಜೊತೆ ಮಾತನಾಡಿದ ಅವರು" ವರಲಕ್ಷ್ಮೀಹಬ್ಬದ ಪ್ರಯುಕ್ತ ಶ್ರೀ ಶಾರದಾಂಬೆ ಹಾಗೂ ಉಭಯಶ್ರೀಗಳ ಅನುಗ್ರಹ ನಮಗೆ ದೊರಕಿದ್ದು ತುಂಬಾ ಸಂತಸ ಉಂಟುಮಾಡಿದೆ.ಪ್ರಧಾನಿ ಮಂತ್ರಿ ನರೇಂದ್ರಮೋದಿ ಅವರ ಆಶಯದಂತೆ ನಾವು ನಮ್ಮ ಖಾತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇವೆ.
ಮೋದಿ ಅವರ ರಾಷ್ಟ್ರಪ್ರೇಮ,ಅವರ ದೂರದೃಷ್ಟಿತ್ವ,ಕಾಯಕದಲ್ಲಿ ಅವರಿಗಿರುವ ಶ್ರದ್ಧೆ,ಜನರ ಮೇಲೆ ಅವರಿಗಿರುವ ಕಾಳಜಿ ಅತ್ಯಂತ ಅನುಪಮ.ಅವರ ನೇತೃತ್ವದ ಸರಕಾರ ಐದು ವರುಷಗಳ ಕಾಲ ಸುಗಮವಾಗಿ ನಡೆಯಲಿ.ದೇಶವನ್ನು ಇನ್ನಷ್ಟು ಮುನ್ನಡೆಸುವ ಶಕ್ತಿ ಅವರಿಗೆ ಜಗನ್ಮಾತೆ ಹಾಗೂ ಜಗದ್ಗುರುಗಳು ಕರುಣಿಸಲಿ ಎಂದು ವಿಶೇಷವಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಹತ್ತು ವರುಷಗಳಲ್ಲಿ ನರೇಂದ್ರ ಮೋದಿ ಅವರು ಮಾಡಿದ ನೂರಾರು ಜನಪರ ಯೋಜನೆಗಳು ಸರ್ವರಿಗೂ ಮಾದರಿಯಾಗಿದೆ.ಅವರ ನೇತೃತ್ವದಲ್ಲಿ ದೇಶ ಇನ್ನಷ್ಟು ಪ್ರಗತಿ ಸಾಧಿಸಲಿದೆ ಎಂದರು. ಕ್ಷೇತ್ರ ಶಾಸಕ ಟಿ.ಡಿ.ರಾಜೇಗೌಡ,ಮಾಜಿ ಸಚಿವ ಡಿ.ಎನ್.ಜೀವರಾಜ್,ಕಾಂಗ್ರೆಸ್ ಮುಖಂಡ ಉಮೇಶ್ ಪೊದುವಾಳ್,ಬಿಜೆಪಿಮಂಡಲ ಅಧ್ಯಕ್ಷ ಉಮೇಶ್ ತಲಗಾರು ಹಾಜರಿದ್ದರು.