For the best experience, open
https://m.samyuktakarnataka.in
on your mobile browser.

ಶೃಂಗೇರಿ ಶಾರದಾ ಪೀಠದಲ್ಲಿ ಇನ್ಮುಂದೆ ವಸ್ತ್ರ ಸಂಹಿತೆ: ಆಗಸ್ಟ್ 15ರಿಂದ ಜಾರಿ

03:21 PM Jul 19, 2024 IST | Samyukta Karnataka
ಶೃಂಗೇರಿ ಶಾರದಾ ಪೀಠದಲ್ಲಿ ಇನ್ಮುಂದೆ ವಸ್ತ್ರ ಸಂಹಿತೆ  ಆಗಸ್ಟ್ 15ರಿಂದ ಜಾರಿ

ಚಿಕ್ಕಮಗಳೂರು: ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶಾರದಾ ಪೀಠಕ್ಕೆ ಆಗಮಿಸುವ ಭಕ್ತರು ಶ್ರೀಮಠದ ಗುರುಗಳ ದರ್ಶನಕ್ಕೆ ವಸ್ತ್ರ ಸಂಹಿತೆ ಇನ್ನು ಮುಂದೆ ಅನುಸರಿಸಬೇಕಿದೆ.
ಶ್ರೀಗಳ ದರ್ಶನ ಹಾಗೂ ಪಾದಪೂಜೆಗೆ ತೆರಳುವ ಭಕ್ತರು ಆಗಸ್ಟ್ 15ರಿಂದ ಭಾರತೀಯ ಸಂಪ್ರದಾಯದಂತೆ ವಸ್ತ್ರ ಧರಿಸಿ ಶ್ರೀಗಳ ದರ್ಶನ ಪಡೆಯಬೇಕು. ಪುರುಷರು ಧೋತಿ ಮತ್ತು ಶಲ್ಯ ಹಾಗೂ ಉತ್ತರೀಯವನ್ನು ಧರಿಸಬೇಕು. ಮಹಿಳೆಯರು ಸೀರೆ, ರವಿಕೆ, ಸಲ್ವಾರ್ ಜತೆಗೆ ದುಪ್ಪಟ ಅಥವಾ ಲಂಗ ದಾವಣಿ ಧರಿಸಿ ಶ್ರೀಗಳ ದರ್ಶನ ಪಡೆಯಬಹುದು ಎಂದು ಮಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಭಾರತೀಯ ಸಂಪ್ರದಾಯದ ಉಡುಗೆಗಳನ್ನು ಹೊರತುಪಡಿಸಿ ಇತರೆ ಉಡುಗೆ ತೊಟ್ಟು ಬಂದಲ್ಲಿ ಗುರುನಿವಾಸದ ಒಳಗೆ ಪ್ರವೇಶವನ್ನು ನಿರ್ಬಂಧಿಸಲು ಶ್ರೀಮಠದ ಆಡಳಿತ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ.